ಬೆಂಗಳೂರು, ಜು 27 (DaijiworldNews/PY): ನಗರದಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ 3000ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದು, ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಕಾಣೆಯಾದ 3000ಕ್ಕೂ ಅಧಿಕ ಮಂದಿ ಇನ್ನು ಪತ್ತೆಯಾಗಿಲ್ಲ. ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರ ಸೋಂಕಿತರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಲೇ ಇದೆ.
ಕೊರೊನಾ ವೈರಸ್ ಪರೀಕ್ಷೆ ಮಾಡುವ ಸಂದರ್ಭ ಸುಮಾರು 4500 ಮಂದಿ ನಕಲಿ ವಿಳಾಸ, ಮೊಬೈನ್ ನಂಬರ್ ನೀಡಿದ್ದರು. ಈ ಪೈಕಿ ಹಲವರಿಗೆ ಸೋಂಕು ದೃಢಪಟ್ಟಿತ್ತು. ಅವರು ನಕಲಿ ವಿಳಾಸ, ಮೊಬೈನ್ ನಂಬರ್ ನೀಡಿರುವ ಕಾರಣ ಅವರನ್ನು ಪತ್ತೆ ಹಚ್ಚುವುದು ಸವಾಲಿನ ಕಾರ್ಯವಾಗಿದೆ.
ಸುಮಾರು 3338 ಮಂದಿಯ ಮಾದರಿ ಪರೀಕ್ಷೆಯ ವರದಿ ಬಂದಿದ್ದು, ಈ ಪೈಕಿ ಕೆಲವು ಮಂದಿ ನಕಲಿ ವಿಳಾಸ ಹಾಗೂ ಮೊಬೈಲ್ ನಂಬರ್ ನೀಡಿದ್ದಾರೆ. ಪಾಲಿಕೆ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.