ನವದೆಹಲಿ, ಜು. 28 (DaijiworldNews/MB) : 2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1,65,302 ಕೋಟಿ ರೂ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕಕ್ಕೆ 18,628 ಕೋಟಿ ರೂ ಜಿಎಸ್ಟಿ ಪರಿಹಾರ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಮಾರ್ಚ್ನಲ್ಲಿ ಕೇಂದ್ರವು 13,806 ಕೋಟಿ ರೂ.ಜಿಎಸ್ ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದ್ದು ಇದನ್ನು ಕೂಡಾ ಗಣನೆಗೆ ತೆಗೆದುಕೊಂಡು 2019-20ರವರೆಗಿನ ಸಂಪೂರ್ಣವಾದ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಹಾಗೆಯೇ ಈ ಅವಧಿಯಲ್ಲಿ 95,444 ಕೋಟಿ ರೂ. ಸೆಸ್(ಹೆಚ್ಚುವರಿ ಕರ) ಸಂಗ್ರಹಿಸಲಾಗಿದ್ದು 2019-20ರ ಪರಿಹಾರದ ಬಿಡುಗಡೆಗಾಗಿ 2017-18 ಮತ್ತು 2018-19ರಲ್ಲಿ ಸಂಗ್ರಹಿಸಿರುವ ಸೆಸ್ ಮೊತ್ತದ ಬಾಕಿ ಹಣವನ್ನು ಕೂಡಾ ಬಳಕೆ ಮಾಡಲಾಗಿದೆ. ಇನ್ನು ಕನ್ಸಾಲಿಟೇಟೆಡ್ ನಿಧಿಯಿಂದ 33,412 ಕೋಟಿ ರೂ. ಯನ್ನು ಕೇಂದ್ರ ಸರ್ಕಾರ ಪರಿಹಾರ ನಿಧಿಗೆ ವರ್ಗಾಯಿಸಿದೆ.
ಇನ್ನು 2019-20ರ ಹಣಕಾಸು ವರ್ಷಕ್ಕೆ ಮಹಾರಾಷ್ಟ್ರಕ್ಕೆ 19,233 ರೂ., ಕರ್ನಾಟಕಕ್ಕೆ 18,628 ಕೋಟಿ ರೂ., ತಮಿಳುನಾಡಿಗೆ 12,305 ಕೋಟಿ ರೂ, ಉತ್ತರ ಪ್ರದೇಶ 9,123 ಕೋಟಿ, ಕೇರಳಕ್ಕೆ 8,111 ಕೋಟಿ ರೂ., ಹರಿಯಾಣಕ್ಕೆ 6,617 ಕೋಟಿ, ಮಧ್ಯಪ್ರದೇಶಕ್ಕೆ 6,538 ಕೋಟಿ ರೂ, ಪಶ್ಚಿಮ ಬಂಗಾಳಕ್ಕೆ 6,200 ಕೋಟಿ ರೂ., ಬಿಹಾರಕ್ಕೆ 5464 ಕೋಟಿ ರೂ., ಉತ್ತರಾಖಂಡ 3,375 ಕೋಟಿ, ಜಮ್ಮು-ಕಾಶ್ಮೀರಕ್ಕೆ 3281 ಕೋಟಿ ರೂ., ತೆಲಂಗಾಣ 3054 ಕೋಟಿ ರೂ, ಆಂಧ್ರಪ್ರದೇಶಕ್ಕೆ 3028 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 2,477 ಕೋಟಿ, ಜಾರ್ಖಂಡ್ ಗೆ 2,219 ಕೋಟಿ ರೂ., ಅಸ್ಸಾಂಕ್ಕೆ 1,284 ಕೋಟಿ ರೂ., ತ್ರಿಪುರಾ 293 ಕೋಟಿ ರೂ. ಹಾಗೂ ಮೇಘಾಲಯಕ್ಕೆ 157 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನುಳಿದಂತೆ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಯಾವುದೇ ಪರಿಹಾರವನ್ನು ಬಿಡುಗಡೆ ಮಾಡಿಲ್ಲ.