ನವದೆಹಲಿ, ಜು 28 (Daijiworld News/MSP): ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿರುವ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದ ಮಾನವ ಪ್ರಯೋಗ ಭಾರತದ 5 ಕಡೆ ನಡೆಸಲು ಸಿದ್ದವಾಗಿದೆ.
ಈ ಬಗ್ಗೆ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಅವರು ಮಾಹಿತಿ ನೀಡಿ" ಭಾರತದ 5 ಕಡೆ ಆಕ್ಸ್ ಫರ್ಡ್ ಸಿದ್ಧಪಡಿಸಿರುವ ಆಸ್ಟ್ರಾ ಜೆನೆಸಿಕಾ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ. ಯಾಕೆಂದರೆ ಭಾರತದಲ್ಲಿ ಲಸಿಕೆಯನ್ನು ಭಾರತೀಯರಿಗೆ ನೀಡುವ ಅಥವಾ ಮಾರಾಟ ಮಾಡುವ ಮೊದಲು ಲಸಿಕೆಯಲ್ಲಿನ ಅಂಶಗಳ ಬಗ್ಗೆ ಮಾಹಿತಿ ಪಡೆಯುವುದು ಹಾಗೂ ತಮ್ಮದೇ ಆಗಿರುವ ಲಸಿಕೆಯ ಡಾಟ ಹೊಂದಿರುವುದು ಅತ್ಯವಶ್ಯಕ ಎಂದು ತಿಳಿಸಿದ್ದಾರೆ.
ಲಸಿಕೆ ಸಿದ್ಧವಾದ ಬಳಿಕ ಅದನ್ನು ತಯಾರಿಸಲು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸಂಸ್ಥೆಗಳಲ್ಲಿ ಒಂದಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಆಕ್ಸ್ಫರ್ಡ್ ಪಾಲುದಾರ ಅಸ್ಟ್ರಾಜೆನೆಕಾ ಆಯ್ಕೆ ಮಾಡಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಮಾರಾಟಕ್ಕೆ ದೇಶದ ಅತೀ ದೊಡ್ಡ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದು ಪರಿಗಣಿಸಿದೆ. ಈ ಲಸಿಕೆಯ ಪ್ರಯೋಗದ ಮೊದಲೆರಡು ಫಲಿತಾಂಶಗಳು ಯಶಸ್ವಿಯಾಗಿದ್ದು, ಇದರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.