ಬೆಂಗಳೂರು, ಜು. 29 (DaijiworldNews/MB) : ಅಪ್ರಾಪ್ತೆ ಬಾಲಕಿಯರ ಅಶ್ಲೀಲ ವಿಡಿಯೋಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಉಡುಪಿ ಮೂಲದ ವ್ಯಕ್ತಿಯನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಉಡುಪಿ ಮೂಲದ ಸೌರವ್ ಶೆಟ್ಟಿ (21).
ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯರ ಲೈಂಗಿಕ ಕ್ರಿಯೆಯ ನಿಷೇಧಿತ ಸಾವಿರಾರು ದೃಶ್ಯಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದು ಅದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮುಖೇನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಹಾಗೆಯೇ ಆನ್ಲೈನ್ ಲಿಂಕ್ ಮೂಲಕ ಶೇರ್ ಮಾಡಿ ಲಕ್ಷಾಂತರ ರೂ. ಸಂಗ್ರಹ ಮಾಡಿದ್ದಾನೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೃಹತ್ ಆದ ಜಾಲವನ್ನು ಹೊಂದಿದ್ದು ನೆರೆ ರಾಜ್ಯದ ಹಲವಾರು ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹ ಮಾಡಿದ್ದಾನೆ. ಸಂಬಂಧಿಸಿದ ರಾಜ್ಯಗಳ ನೋಡಲ್ ಅಧಿಕಾರಿಗಳ ಮೂಲಕ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲುವಂತೆ ಸರ್ಕಾರ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಆರೋಪಿಯಿಂದ ಸಂಗ್ರಹಿಸಿದ್ದ ಅಶ್ಲೀಲ ವಿಡಿಯೋಗಳು, ಡಿಜಿಟಲ್ ಉಪಕರಣಗಳು, ಸಾಮಾಜಿಕ ಜಾಲತಾಣ ಮತ್ತು ಆನ್ಲೈನ್ ಕ್ಲೌಡ್ ಖಾತೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.