ನವದೆಹಲಿ, ಜು. 29 (DaijiworldNews/MB) : ಭಾರತದ ಬಹು ಕಾತುರದ ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಅಂಬಾಲಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ.
ಸೋಮವಾರ ಫ್ರಾನ್ಸ್ನ ಮೆರಿಗ್ನಾಕ್ನಿಂದ ಈ ಯುದ್ಧ ವಿಮಾನ ಹೊರಟ್ಟಿದ್ದು ಭಾರತದ ವಾಯು ಪ್ರದೇಶಕ್ಕೆ ಪ್ರವೇಶ ಮಾಡಿದ ಬಳಿಕ ಐಎನ್ಎಸ್ ಕೊಲ್ಕತ್ತಾ ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತ ಮಾಡಿದೆ. ಇದೀಗ ಸುಮಾರು 7364 ಕಿ.ಮೀ ದೂರ ಚಲಿಸಿ ಭಾರತದ ವಾಯುನೆಲೆಯನ್ನು ತಲುಪಿದೆ.
ಹಾಗೆಯೇ ಲ್ಯಾಂಡ್ಗೂ ಮೊದಲು ರಫೇಲ್ ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ನಿಯೋಜನೆ ಮಾಡಲಾಗಿರುವ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೋಲ್ಕತ್ತಾದೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿತ್ತು.
ಇನ್ನು ಚೀನಾ ಗಡಿ ಸಂಘರ್ಷದ ಕಾರಣ ಐದು ವಿಮಾನಗಳನ್ನು ಮುಂದಿನ ವಾರ ನಿಯೋಜನೆ ಮಾಡಲಾಗುವುದು ಎಂದು ವರದಿ ತಿಳಿಸಿದೆ.
59,000 ಕೋಟಿಗಳ ಒಪ್ಪಂದದಲ್ಲಿ ಸೆಪ್ಟೆಂಬರ್ 2016ರಲ್ಲಿ ಭಾರತ ಫ್ರಾನ್ಸ್ನೊಂದಿಗೆ 36 ರಫೇಲ್ ಫೈಟರ್ ಜೆಟ್ಗಳಿಗೆ ಸಹಿ ಹಾಕಿದ್ದು ಈ ಒಪ್ಪಂದದಂತೆ ವರ್ಷಕ್ಕೆ 12 ವಿಮಾನಗಳನ್ನು ಭಾರತಕ್ಕರ ಆಗಮಿಸಲಿದೆ.