ಶಿವಮೊಗ್ಗ, ಜು 29 (DaijiworldNews/PY): ಸರ್ಕಾರಕ್ಕೆ ಒಂದು ಸಾವಿರ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಮೂರ್ನಾಲ್ಕು ದಿನಗಳಲ್ಲಿ ಅನುಮತಿ ದೊರೆಯುವಂತ ಸಾಧ್ಯತೆ ಇದೆ ಎಂದಯ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಆಯುರ್ವೇದ ಚಿಕಿತ್ಸೆ ನೀಡಿದ ಹತ್ತು ಮಂದಿ ಸೋಂಕಿತರು ಈಗಾಗಲೇ ಗುಣಮುಖರಾಗಿದ್ದು, ಈ ಮೂಲಕ ಯಶಸ್ವಿಯಾಗಿದ್ದೇವೆ. ಅಲ್ಲದೇ, ಮಧುಮೇಹ, ಟಿಬಿ ಸೇರಿದಂತೆ ಅಧಿಕ ರಕ್ತದೊತ್ತಡ ಹಾಗೂ ಹಲವು ಲಕ್ಷಣವಿದ್ದ 23 ರಿಂದ 65 ವರ್ಷದೊಳಗಿನ 10 ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಿದ್ದು, ಅವರೂ ಕೂಡಾ ಗುಣಮುಖರಾಗಿದ್ದಾರೆ. ಇದು ನಾವು ಮಾಡಿದ ಪ್ರಾಥಮಿಕ ಯಶಸ್ಸು. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಚಿಕಿತ್ಸೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎಷ್ಟೇ ಸೋಂಕಿತರಿದ್ದರೂ ಕೂಡಾ ನಾವು ಚಿಕಿತ್ಸೆ ನೀಡಿಲು ಸಿದ್ದ. ಅಲ್ಲದೇ, ನಾನು ಸಿದ್ದಪಡಪಸಿರುವ ಔಷಧದ ಹಕ್ಕನ್ನು ಸರ್ಕಾರಕ್ಕೆ ಉಚಿತವಾಗಿ ನೀಡಲು ಕೂಡಾ ತಯಾರಿದ್ದೇನೆ. ಅಲ್ಲದೇ, ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಆಗಮಿಸಿದವರಿಗೆ ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿರುವ ಸೋಂಕನ್ನು ನಿಯಂತ್ರಣ ಮಾಡಬೇಕಿದೆ. ಈ ಕಾರಣದಿಂದ ನಾವು ದೊಡ್ಡ ಮಟ್ಟದ ಸ್ಯಾಂಪಲ್ಸ್ಗೆ ಬೇಡಿಕೆ ಇಟ್ಟಿದ್ದೇವೆ ಎಂದಿದ್ದಾರೆ.
ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಂಶೋಧಿಸಲಾದ ಔಷಧವನ್ನು ಕೊಡಿಸುವ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.