ಬೆಂಗಳೂರು, ಜು 29 (DaijiworldNews/PY): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಬುಧವಾರ 5,503 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1,12,504ಕ್ಕೆ ಏರಿಕೆಯಾಗಿದೆ.
ಬುಧವಾರ 92 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ 2147 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಬುಧವಾರ ಒಂದು ದಿನವೇ 2,397 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 42,901ಕ್ಕೆ ಏರಿಕೆಯಾಗಿದೆ. ಪ್ರಸ್ತುತ 67,448 ಸಕ್ರಿಯ ಪ್ರಕರಣಗಳಿವೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2,270 ಪ್ರಕರಣಗಳ ದಾಖಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 51 ಸಾವಿರಕ್ಕೆ ಏರಿಕೆಯಾಗಿದೆ. ಈ ನಡುವೆ 1,118 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 13,879 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ 30 ಮಂದಿ ಬಲಿಯಾಗಿದ್ದು, ಒಟ್ಟು 987 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ 208, ಉಡುಪಿ 173, ಹಾಸನ 95, ಉತ್ತರ ಕನ್ನಡ 75, ಶಿವಮೊಗ್ಗ 131, ತುಮಕೂರು 128, ಯಾದಗಿರಿ 114, ಚಿತ್ರದುರ್ಗ 52, ಹಾವೇರಿ 50, ಬೆಂಗಳೂರು ಗ್ರಾಮಾಂತರ 49, ಕೋಲಾರ 34, ಧಾರವಾಡ 175, ಕಲಬುರಗಿ 168, ಚಿಕ್ಕಬಳ್ಳಾಪುರ 96, ಚಿಕ್ಕಮಗಳೂರು 33, ಚಾಮರಾಜನಗರ 20, ಬಳ್ಳಾರಿಯಲ್ಲಿ 338, ಬೆಳಗಾವಿ 279, ದಾವಣಗೆರೆ 225, ಮೈಸೂರು 200, ಕೊಡಗು 8, ಬಾಗಲಕೋಟೆ 57, ರಾಮನಗರ 56, ರಾಯಚೂರು 73, ಮಂಡ್ಯ 70, ಬೀದರ್ 91, ವಿಜಯಪುರ 90. ಕೊಪ್ಪಳ 84, ಗದಗ 61 ಪ್ರಕರಣಗಳು ಪತ್ತೆಯಾಗಿವೆ.