ನವದೆಹಲಿ, ಜು 30 (Daijiworld News/MSP): ಕೊರೊನಾದ ಗಣನೀಯ ಏರಿಕೆಯ ನಡುವೆ ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 5ರಿಂದ ರಾತ್ರಿ ಕರ್ಫ್ಯೂ ತೆರವುಗೊಳಿಸಿ ,ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಈ ಮಾರ್ಗಸೂಚಿ ಪ್ರಕಾರ ಶಾಲಾ- ಕಾಲೇಜು , ಕೋಚಿಂಗ್ ಸೆಂಟರ್ ಗಳು, ಮೆಟ್ರೋ , ಸಿನಿಮಾ ಮಂದಿರಗಳನ್ನು ತೆರೆಯಲು ಆಗಸ್ಟ್ 31ರ ವರೆಗೆ ಅವಕಾಶ ನೀಡಿಲ್ಲ.
ಕಂಟೈನ್ಮೆಂಟ್ ಜೋನ್ಗಳಲ್ಲಿ ಆ.31ರವರೆಗೆ ಕಠಿಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕಂಟೈನ್ಮೆಂಟ್ ಜೋನ್ಗಳ ಹೊರಗೆ ಯಾವ ಚಟುವಟಿಗೆಗಳನ್ನು ಅನುಮತಿ ನೀಡಬಹುದು ಎಂಬ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಚಿತ್ರಮಂದಿರ , ಮನೋರಂಜನಾ ಪಾರ್ಕ್ ಗಳು , ಸ್ವಿಮ್ಮಿಂಗ್ ಫೂಲ್ ತೆರೆಯುವಂತಿಲ್ಲ ಎಂದು ತಿಳಿಸಿದೆ.
ಇದರೊಂದಿಗೆ ವಂದೇ ಭಾರತ ಮಿಷನ್ ಹೊರತಾದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.