ಮಹಾರಾಷ್ಟ್ರ, ಜು 30 (DaijiworldNews/PY): ಮರಾಠಿ ನಟ ಅಶುತೋಷ್ ಭಕ್ರೆ (32) ಮರಾಠವಾಡ ಪ್ರದೇಶದ ನಾಂದೇಡ್ ಪಟ್ಟಣದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜು 29ರ ಬುಧವಾರ ಮಧ್ಯಾಹ್ನ ನಾಂದೇಡ್ನ ಗಣೇಶನಗರ ಪ್ರದೇಶದ ಫ್ಲ್ಯಾಟ್ನಲ್ಲಿ ಅಶುತೋಷ್ ಭಕ್ರೆ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಶುತೋಷ್ ಭಕ್ರೆ ಅವರು ಖುಲ್ತಾ ಕಲಿ ಖುಲೇನಾ ಧಾರಾವಾಹಿಯ ಮೂಲಕ ಖ್ಯತಿ ಗಳಿಸಿದ ಮಾರಾಠಿ ನಟಿ ಮಯೂರಿ ದೇಶ್ಮುಖ್ ಅವರ ಪತಿ. ಅಶುತೋಶ್ ಅವರು 'ಭಾಕರ್' ಹಾಗೂ ‘ಇಚಾರ್ ಥರ್ಲಾ ಪಕ್ಕ’ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದರು.
ಅಶುತೋಷ್ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಶುತೋಶ್ ಅವರು ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾನೆ ಎನ್ನುವ ವೀಡಿಯೊವನ್ನು ಹಂಚಿಕೊಂಡಿದ್ದರು.
ನಾಂದೇಡ್ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಅಶುತೋಷ್ ಅವರದ್ದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.