ನವದೆಹಲಿ, ಜು 30 (Daijiworld News/MSP): ಜಗತ್ತಿನ 7ನೇ ಅತಿದೊಡ್ಡ ಆನ್ಲೈನ್ ಜ್ಞಾನತಾಣ ಎನಿಸಿರುವ ವಿಕಿಪೀಡಿಯಾ ಪ್ರತಿಷ್ಠಾನ (ಡಬ್ಲ್ಯುಎಂಎಫ್)ವು ಭಾರತೀಯರಿಂದ 150 ರೂಪಾಯಿ ದೇಣಿಗೆ ಕೇಳಿದೆ.
ಉಚಿತ ಮಾಹಿತಿ ನೀಡುವ ವಿಕಿಪೀಡಿಯಾ ಪ್ರತಿಷ್ಠಾನ ವೂ ತನ್ನ ವೆಬ್'ಸೈಟ್ ನ್ನು ವ್ಯಾಪಾರೀಕಣಗೊಳಿಸುವುದರಿಂದ ಓದುಗರಿಗೆ ದೊಡ್ಡ ನಷ್ಟವಾಗಲಿದೆ ಎಂಬ ಕಾಳಜಿಯೊಂದಿಗೆ ದೇಣಿಗೆ ನೀಡುವಂತೆ ಕೇಳಿಕೊಂಡಿದೆ.
ಗೂಗಲ್ನಲ್ಲಿ ಏನನ್ನಾದರೂ ಹುಡುಕಿದರೂ ಸಹ, 90 ಪ್ರತಿಶತ ಸರ್ಚ್ ಎಂಜಿನ್ ತೋರಿಸುವ ಮೊದಲ ಲಿಂಕ್ ವಿಕಿಪೀಡಿಯಾವಾಗಿರುತ್ತದೆ.ಗೂಗಲ್ ನಲ್ಲಿ ಯಾವುದೇ ವ್ಯಕ್ತಿ, ಸ್ಥಳ, ಪ್ರಾಣಿ, ಪಕ್ಷಿ ಬಗ್ಗೆ ಮಾಹಿತಿ ಕೇಳಿದರೂ ಸಿಗುವುದು ವಿಕಿಪೀಡಿಯಾದಲ್ಲಿಯೇ.
ಭಾರತವೂ ವಿಕಿಪೀಡಿಯದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2019 ರಲ್ಲಿ, ವಿಕಿಪೀಡಿಯಾಕ್ಕೆ ಭಾರತೀಯ ಸಂದರ್ಶಕರ ಸಂಖ್ಯೆ 771 ಮಿಲಿಯನ್ಗಿಂತ ಹೆಚ್ಚಿತ್ತು , ಮಾತ್ರವಲ್ಲ ವಿಕಿಪೀಡಿಯ ಪೇಜ್ ವಿವ್ಯೂ ನಲ್ಲಿ ಐದನೇ ಅತಿದೊಡ್ಡ ಸಂಖ್ಯೆ ಇದಾಗಿತ್ತು.
ಈ ಜ್ಞಾನತಾಣ ನಡೆಸುತ್ತಿರುವ ವಿಕಿಪೀಡಿಯಾ ಪ್ರತಿಷ್ಠಾನ ಸಂಕಷ್ಟಕ್ಕೆ ಸಿಲುಕಿದ್ದು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಲು, ‘ಉಚಿತ ಆನ್ಲೈನ್ ಎನ್ಸೈಕ್ಲೋಪೀಡಿಯಾ’ ಭಾರತೀಯ ಬಳಕೆದಾರು ತಲಾ 150 ರೂ. ದೇಣಿಗೆ ನೀಡುವಂತೆ ದೇಣಿಗೆ ಸಹಾಯ ಬಯಸಿದೆ.
ವಿಕಿಪೀಡಿಯಾ ಉಚಿತ ವೆಬ್ಸೈಟ್ ಆಗಿದ್ದರೂ, ಅದರಲ್ಲಿರುವ ಎಲ್ಲ ವಿಷಯವನ್ನು ವಿಶ್ವದಾದ್ಯಂತ ಸ್ವಯಂಸೇವಕರ ಗುಂಪು ವಿಷಯಗಳನ್ನು ಸಂಪಾದನೆ ಮಾಡುತ್ತಿದೆ ಹಾಗೂ ನಿರ್ವಹಿಸುತ್ತಿದೆ. ಆದರೆ ವೆಬ್ಸೈಟ್ ಕಾರ್ಯಾಚರಣೆಗಳನ್ನು ನಡೆಸಲು ಸಾಕಷ್ಟು ಬಂಡವಾಳ ಬೇಕಾಗುತ್ತದೆ. ಹೀಗಾಗಿಯೇ ಅದು ವಿತ್ತೀಯ ಸಹಾಯವನ್ನು ಬಯಸಿ ದೇಣಿಗೆ ಯಾಚಿಸಿದೆ.