ಇಂಫಾಲ್, ಜು 30 (DaijiworldNews/PY): ಮಣಿಪುರದ ಇಂಫಾಲ್ನ ದಕ್ಷಿಣಕ್ಕೆ ಚಾಂಡೆಲ್ ಜಿಲ್ಲೆಯ ಮಯನ್ಮಾರ್ ಗಡಿಯಲ್ಲಿನ ಅಸ್ಸಾಂ ರೈಫಲ್ಸ್ ಘಟಕದ ಮೇಲೆ ಉಗ್ರರು ದಾಳಿ ನಡೆಸಿದ್ದು, ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.
ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಸೈನ್ಯದ ಉಗ್ರರು ದಾಳಿ ಮಾಡಿದ್ದು, ಪರಿಣಾಮ ಅಸ್ಸಾಂ ರೈಫಲ್ಸ್ನ ಮೂವರು ಸೈನಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದು, ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಲೀಮಾಖಾಂಗ್ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಯೋಧರು ಗಸ್ತು ತಿರುಗುತ್ತಿದ್ದ ಸಂದರ್ಭ ಉಗ್ರರು ಐಇಡಿ ಸ್ಪೋಟಿಸಿ ಗುಂಡಿನ ದಾಳಿ ನಡೆಸಿದ್ದಾರೆ.