ನವದೆಹಲಿ, ಜು 30 (DaijiworldNews/PY): ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಗುರುವಾರ ದೆಹಲಿಯ ಲೋಧಿ ಎಸ್ಟೇಟ್ ಬಂಗಲೆಯನ್ನು ತೊರೆದಿದ್ದಾರೆ.
ಆಗಸ್ಟ್ 1ರೊಳಗೆ ನಿವಾಸವನ್ನು ಖಾಲಿ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಈ ನಿಟ್ಟಿನಲ್ಲಿ ಪ್ರಿಯಾಂಕ ಗಾಂಧಿ ಅವರು ದೆಹಲಿ ನಿವಾಸವನ್ನು ತೊರೆದಿದ್ದು, ಗುರುಗ್ರಾಮದಲ್ಲಿನ ಅರಾಲಿಯಾ ವಸತಿ ಸಂಕೀರ್ಣದಲ್ಲಿರುವ ನಿವಾಸಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
ಎಸ್ಜಿಪಿ ಭದ್ರತೆಯನ್ನು ರದ್ದುಪಡಿಸಿರುವ ಕಾರಣ ದೆಹಲಿಯ ಲುಟಿಯೆನ್ಸ್ ಬಂಗಲೆಯನ್ನು ಒಂದು ತಿಂಗಳೊಳಗಾಗಿ ತೆರವು ಮಾಡಬೇಕು ಎಂದು ಜು 1ರಂದು ಪ್ರಿಯಾಂಕ ಗಾಂಧಿ ಅವರಿಗೆ ತಿಳಿಸಿತ್ತು