ಬೆಂಗಳೂರು, ಜು. 30 (DaijiworldNews/SM): ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಗುರುವಾರ ಒಂದೇ ದಿನ 6128 ಹೊಸ ಪ್ರಕರಣಗಳು ವರದಿಯಾಗಿವೆ. ಈ ನಡುವೆ 83 ಮಂದಿ ಗುರುವಾರದಂದು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೊನಾ ಸಾವಿನ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.
ಆ ಮೂಲಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ 1,18,632ಕ್ಕೇರಿಕೆಯಾಗಿದೆ. ಸದ್ಯ 69700 ಸಕ್ರಿಯ ಪ್ರಕರಣಾಗಳು ರಾಜ್ಯದಲ್ಲಿವೆ. ಇನ್ನು ರಾಜಧಾನಿ ಬೆಂಗಳೂರು ನಗರದಲ್ಲಿ 2,233 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, 20 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,324ಕ್ಕೆ ತಲುಪಿದೆ.