ಬೆಂಗಳೂರು, ಜು. 31 (DaijiworldNews/MB) : ರಾಜ್ಯ ಸರ್ಕಾರ ಅನ್ಲಾಕ್–3 ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಶುಕ್ರವಾರ ಆ.1 ರಿಂದ ರಾತ್ರಿ ಕರ್ಫ್ಯೂ ಮುಕ್ತಾಯವಾಗಲಿದೆ. ಹಾಗೆಯೇ ಭಾನುವಾರದಂದು ಲಾಕ್ಡೌನ್ ಕೂಡಾ ತೆರವುಗೊಳಿಸಲಾಗಿದೆ.
ಇನ್ನು ಅಂತರರಾಜ್ಯ ಪ್ರಯಾಣಿಕರ ಓಡಾಟಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಸಂಚಾರಕ್ಕಾಗಿ ಯಾವುದೇ ಅನುಮತಿ ಪಡೆಯಬೇಕಾಗಿಲ್ಲ.
ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು ಅದರ ಪಾಲನೆ ಕಡ್ಡಾಯ ಎಂದು ಆದೇಶಿಸಲಾಗಿದೆ.
ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯದಾದ್ಯಂತ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಅನುಮತಿಸಲಾಗುವುದು, ಸಾಮಾಜಿಕ ದೂರವಿರುವುದು ಮತ್ತು ಮಾಸ್ಕ್ ಧರಿಸುವಂತಹ ಇತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.