ನವದೆಹಲಿ, ಜು 31 (Daijiworld News/MSP): ಚೀನಾದ ಆಟಾಟೋಪಕ್ಕೆ ಅಂಕುಶ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಗುರುವಾರದಿಂದ ಚೀನಾದ ಕಲರ್ ಟೆಲಿವಿಷನ್ ಸೆಟ್ಗಳ ಆಮದಿಗೆ ನಿರ್ಬಂಧ ಹೇರಿದೆ.
ಆಮದು ನೀತಿಯನ್ನು ಬದಲಿಸಲಾಗಿದ್ದು, "ಆಮದು" ಬದಲಿಗೆ "ನಿರ್ಬಂಧಿತ ಆಮದಿ"ಗೆ ಅವಕಾಶ ಮಾಡಿಕೊಟ್ಟಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶಕರು ಈ ಕುರಿತಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಯಾವುದೇ ಕಂಪನಿಯ ಕಲರ್ ಟಿವಿ ಆಮದು ಮಾಡಿಕೊಳ್ಳಬೇಕಾದರೆ ವಾಣಿಜ್ಯ ಸಚಿವಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ರ ಒಳಗೆ, 31 781 ಮಿಲಿಯನ್ ಮೌಲ್ಯದ ಕಲರ್ ಟಿವಿ ಸೆಟ್ಗಳನ್ನು ಆಮದು ಮಾಡಿಕೊಳ್ಳಲಾಗಿದ್ದು ಅವುಗಳಲ್ಲಿ ಹೆಚ್ಚಿನವು ವಿಯೆಟ್ನಾಂ (8 428 ಮಿಲಿಯನ್) ಮತ್ತು ಚೀನಾ (2 292 ಮಿಲಿಯನ್) ನಿಂದ ಅಮದಾಗಿತ್ತು.
ಭಾರತವು ತನ್ನ ಉತ್ತರ ನೆರೆಯ ದೇಶಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ನೀತಿಯ ಭಾಗವಾಗಿ ಚೀನಾದೊಂದಿಗಿನ ವ್ಯಾಪಾರ ವಹಿವಾಟು ಸಂಪರ್ಕವನ್ನು ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ. ಭಾರತಕ್ಕೆ ಚೀನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿವಿ ಸೆಟ್ ಗಳು ಆಮದಾಗುತ್ತವೆ. ವಿಯೆಟ್ನಾಮ್, ಮಲೇಷ್ಯಾ, ಹಾಂಕಾಂಗ್, ಕೊರಿಯಾ, ಇಂಡೋನೇಷ್ಯಾ, ಥೈಲ್ಯಾಂಡ್ ಜರ್ಮನಿಗಳಿಂದಲೂ ಟಿವಿ ಆಮದಾಗುತ್ತಿದೆ. ಕಲರ್ ಟಿವಿ ಆಮದು ನಿಯಮಾವಳಿ ನಿರ್ಬಂಧಿಸಲಾಗಿದ್ದು ಟಿವಿ ಆಮದಿಗೆ ವಾಣಿಜ್ಯ ಸಚಿವಾಲಯದ ಅನುಮತಿಯನ್ನು ಪಡೆಯಬೇಕಿದೆ.
ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಚೀನಾದಿಂದ ಆಮದಾಗುವ ವಸ್ತುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಗುರುವಾರ ಬಣ್ಣ ಟೆಲಿವಿಷನ್ ಸೆಟ್ಗಳ ಆಮದಿಗೆ ನಿರ್ಬಂಧ ಹೇರಿದೆ.
ಭಾರತ - ಚೀನಾ ಗಡಿ ಘರ್ಷಣೆಯ ನಂತರ 20 ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯಲ್ಲಿ ಚೀನೀ ಸೈನಿಕರು ಸಾವನ್ನಪ್ಪಿದ ಬಳಿಕ ್ ಚೀನಾದಿಂದಾಗುವ ಆಮದು ಮತ್ತು ಹೂಡಿಕೆಗಳ ಬಗ್ಗೆ ಭಾರತದಲ್ಲಿ ತೀವ್ರವಾಗಿ ಮರು ಪರಿಶೀಲನೆ ನಡೆಸುತ್ತಿವೆ.