ಬೆಂಗಳೂರು, ಜು 31 (DaijiworldNews/PY): ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ನೋಡಲು ಮಾತ್ರವೇ ಮೃತರ ಸಂಬಂಧಿಕರಿಗೆ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಈ ಹಿಂದಿನ ವಿಚಾರಣೆಯ ಸಂದರ್ಭ, ಕೊರೊನಾದಿಂದ ಸಾವನ್ನಪ್ಪಿದವರ ಗೌರವಯುತ ಅಂತ್ಯ ಸಂಸ್ಕರಕ್ಕಾಗಿ ಮಾರ್ಗಸೂಚಿ ರೂಪಿಸಿಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆ ಸರ್ಕಾರವು ಜು.29ರಂದು ಮಾರ್ಗಸೂಚಿಯನ್ನು ಹೊರಡಿಸಿದ್ದು, ಗುರುವಾರದಂದು ಆ ಮಾರ್ಗಸೂಚಿಯನ್ನು ಹೈಕೋರ್ಟ್ಗೆ ನೀಡಿತ್ತು.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ದೇಹವನ್ನು ಮುಟ್ಟಿದರೆ ಸೋಂಕು ಹರಡುತ್ತದೆಯೋ ಅಥವಾ ಇಲ್ಲವೋ ಎನ್ನುವ ವಿಚಾರವಾಗಿ ತಜ್ಞರು ಇನ್ನೂ ಕೂಡಾ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಈ ಕಾರಣದಿಂದ ಮೃತ ದೇಹವನ್ನು ಮುಟ್ಟುವುದಕ್ಕೆ ಅಥವಾ ಚುಂಬಿಸುವುದಕ್ಕೆ ಅನುಮತಿ ಕಲ್ಪಿಸಬಾರದು. ಅಲ್ಲದೇ, ಮೃತದೇಹವನ್ನು ನೋಡುವ ವೇಳೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂದು ಪೀಠ ಹೇಳಿದೆ.