ನವದೆಹಲಿ, ಜು. 31 (DaijiworldNews/MB) : ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಲ್ಲೇ ಇದ್ದು ಈ ನಡುವೆ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಪ್ರತಿ ಲೀಟರ್ ಡಿಸೇಲ್ ಗೆ ಎಂಟು ರೂ. ಇಳಿಸುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿದೆ.
ನವದೆಹಲಿಯಲ್ಲಿ ಪೆಟ್ರೋಲ್ ಬೆಲೆಗಿಂತ, ಡೀಸೆಲ್ ದರವೇ ಹೆಚ್ಚಾಗಿದ್ದು ಈ ಹಿನ್ನೆಲೆ ಡೀಸೆಲ್ ದರದ ವ್ಯಾಟ್ ಅನ್ನು ಇಳಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಕೇಜ್ರಿವಾಲ್ ಸರ್ಕಾರ ಎಂಟು ರೂ. ಇಳಿಸಿದ ಬಳಿಕ ಜುಲೈ ಆರಂಭದಲ್ಲಿ 82 ಇದ್ದ ಡೀಸೆಲ್ ದರ ಈಗ 73ಕ್ಕೆ ಇಳಿದಿದೆ.