ಮುಂಬೈ, ಜು. 31 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ.
ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಹಲವು ಅನುಮಾನಗಳಿಗೆ ಕಾರಣವಾಗಿದ್ದು ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಸುಶಾಂತ್ ಅವರ ವಕೀಲ ರಿಯಾ ಚಕ್ರವರ್ತಿ ವಿರುದ್ಧ 15 ಕೋ.ರೂ ಎಗರಿಸಿದ ಆರೋಪ ಮಾಡಿದ್ದು ರಜಪೂತ್ ತಂದೆ ರಿಯಾ ಚಕ್ರವರ್ತಿ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಯಾ ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆ. ಬಳಿಕ ತಾತ್ಕಾಲಿಕವಾಗಿ ಬೇರೆ ಮನೆಯಲ್ಲಿ ವಾಸವಿದ್ದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಯ ಮಧ್ಯೆ ಹಲವರು ಈ ಪ್ರಕರಣದ ಇಡಿ ತನಿಖೆಗೆ ಒತ್ತಾಯಿಸಿದ್ದರು. ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಈ ಪ್ರಕರಣದ ಇಡಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಹಲವಾರು ಮಂದಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಕನಿಷ್ಟ ಪಕ್ಷ ಇಡಿ ತನಿಖೆಯಾದರೂ ನಡೆಸಬೇಕು ಎಂದು ಹೇಳಿದ್ದರು.
ಇದೀಗ ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಪೊಲೀಸರಿಂದ ಎಫ್ಐಆರ್ ಪ್ರತಿಯನ್ನು ಕೋರಿರುವ ಇಡಿ ಪ್ರಕರಣ ದಾಖಲಿಸಿದೆ.