ಲಕ್ನೋ, ಆ. 01 (DaijiworldNews/MB) : ''ನಾನು 1992 ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡದ ನಿರ್ಧಾರದಿಂದ ನನಗೆ ಹೆಮ್ಮೆಯಿದೆ'' ಎಂದು ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹೇಳಿದ್ದಾರೆ.
''ಅಯೋಧ್ಯೆ ಜಿಲ್ಲಾಡಳಿತ ಸಾಕೇತ್ ಕಾಲೇಜು ಬಳಿ ನಾಲ್ಕು ಬೆಟಾಲಿಯನ್ ಕರ ಸೇವಕರು ಗುಂಪು ಗೂಡಿದ್ದಾರೆ ಎಂದು ಪತ್ರ ಬರೆದಿತ್ತು. ಈ ಸಂದರ್ಭದಲ್ಲಿ ನಾನು ಗುಂಡು ಹಾರಿಸಬೇಡಿ, ಬೇರೆ ರೀತಿಯಲ್ಲಿ ಅವರನ್ನು ನಿಯಂತ್ರಣಕ್ಕೆ ತನ್ನಿ ಎಂದು ಹೇಳಿದ್ದೆ. ನಾನು ಫೈರಿಂಗ್ ಆದೇಶ ನೀಡಿದ್ದಲ್ಲಿ ಹಲವರು ಸಾವನ್ನಪ್ಪುತ್ತಿದ್ದರು. ಇದರಿಂದಾಗಿ ದೇಶದ ವಿವಿಧ ಭಾಗಗಳಿಂದ ಜನರು ಅಲ್ಲಿಗೆ ಬಂದು ಸೇರುತ್ತಿದ್ದರು. ಹಿಂಸಾಚಾರ ಮತ್ತಷ್ಟು ಹೆಚ್ಚಾಗುತ್ತಿತ್ತು. ಈ ಬಗ್ಗೆ ಆಲೋಚಿಸಿದಾಗ ನಾನು ಪೈರಿಂಗ್ ಆದೇಶ ನೀಡದಿರುವುದು ಹಾಗೂ ಒರ್ವ ಕರ ಸೇವಕ ಸಾವನ್ನಪ್ಪದಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗೆಯೇ ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನಿಸಿರುವುದಕ್ಕೆ ನನಗೆ ಹೆಮ್ಮೆಯಿದೆ'' ಎಂದು ಹೇಳಿದ್ದಾರೆ.
''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಕಾಲ ನಡೆದ ಹೋರಾಟಕ್ಕೆ ಈಗ ಫಲ ದೊರೆತಿದೆ. ರಾಮ ದೇವರ ಬಗ್ಗೆ ನನಗೆ, ಅಪಾರ ನಂಬಿಕೆಯಿದೆ ಹಾಗಾಗಿ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ'' ಎಂದು ಹೇಳಿದ್ದಾರೆ.