ನವದೆಹಲಿ, ಆ 01 (DaijiworldNews/HR): ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್(64) ಆಗಸ್ಟ್ 1 ರಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
2010ರಲ್ಲಿ ಸಮಾಜವಾದಿ ಪಕ್ಷದಿಂದ ರಾಜೀನಾಮೆ ನೀಡಿದ್ದ ಇವರಿಗೆ ೨೦೧೩ರಲ್ಲಿ ಕಿಡ್ನಿ ವೈಫಲ್ಯವಾಗಿತ್ತು. ಆ ನಂತರ ಸಿಂಗಪೂರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಗಳಿಂದ ಐಸಿಯುವಿನಲ್ಲಿದ್ದ ಇವರು ಇಂದು ವಿಧಿವಶರಾಗಿದ್ದಾರೆ.
ಅವರು ಪತ್ನಿ ಪಂಕಜಾ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ವರ್ಷ ಮಾರ್ಚ್ನಲ್ಲಿ ‘ಅಮರ್ ಸಿಂಗ್ ನಿಧನ’ ಎಂಬ ವದಂತಿ ಹರಡಿತ್ತು. ಆಗ, ‘ಟೈಗರ್ ಜಿಂದಾ ಹೇ’ ಎಂಬ ಸಂದೇಶದೊಂದಿಗೆ ಅವರೇ ಸ್ಪಷ್ಟನೆ ನೀಡಿದ್ದರು.
ಅಮರ್ ಸಿಂಗ್ ಅವರು ಇಂದು ಬೆಳಗ್ಗೆ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರಿಗೆ ಟ್ವೀಟ್ ಮಾಡುವುದರ ಮೂಲಕ ಗೌರವ ಸಮರ್ಪಣೆಯನ್ನು ಮಾಡಿದ್ದರು. ಜೊತೆಗೆ ಬಕ್ರೀದ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು.