ಭೋಪಾಲ್, ಆ 01 (DaijiworldNews/PY): ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವು ಪ್ರತಿಯೊಬ್ಬ ಭಾರತೀಯರ ಒಪ್ಪಿಗೆಯೊಂದಿಗೆ ನಿರ್ಮಾಣವಾಗುತ್ತದೆ. ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕಮಲನಾಥ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣವನ್ನು ನಾನು ಸ್ವಾಗತಿಸುತ್ತೇನೆ. ರಾಮ ಮಂದಿರದ ನಿರ್ಮಾಣಕ್ಕಾಗಿ ದೇಶವಾಸಿಗಳು ನಿರೀಕ್ಷಿಸುತ್ತಿದ್ದರು. ರಾಮ ಮಂದಿರದ ನಿರ್ಮಾಣವು ಪ್ರತಿಯೊಬ್ಬ ಭಾರತೀಯನ ಒಪ್ಪಿಗೆಯೊಂದಿಗೆ ಆಗಬೇಕು. ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಕೂಡಾ ಟ್ವೀಟ್ ಮಾಡಿದ್ದು, ಭಗವಂತ ರಾಮ ನಮ್ಮ ನಂಬಿಕೆಯ ಕೇಂದ್ರ ಬಿಂದುವಾಗಿದ್ದಾನೆ. ಇಂದು ಇಡೀ ದೇಶ ಕೂಡ ರಾಮನ ನಂಬಿಕೆಯ ಮೇಲೆ ಕೆಲಸ ಮಾಡುತ್ತಿದೆ. ಹಾಗಾಗಿ ನಾವೆಲ್ಲರೂ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯವು ನಿರ್ಮಾಣವಾಗಬೇಕೆಂದು ಬಯಸುತ್ತೇವೆ. ಸ್ವಯಂ ರಾಜೀವ್ ಗಾಂಧಿ ಕೂಡಾ ಇದನ್ನೇ ಬಯಸಿದ್ದರು ಎಂದು ತಿಳಿಸಿದ್ದಾರೆ.