ನವದೆಹಲಿ, ಆ. 02 (DaijiworldNews/MB) : ಒಂದೆಡೆ ಲಡಾಖ್ ಬಳಿಯಿಂದ ಚೀನಾ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳುತ್ತಿದ್ದು ಮತ್ತೊಂದೆಡೆ ಉತ್ತರಾಖಂಡದ ಲಿಪುಲೇಖ್ ಬಳಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಜಮಾಯಿಸುತ್ತಿದೆ.
ಭಾರತ ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು ಬಳಿಕ ಉಭಯ ರಾಷ್ಟ್ರಗಳ ಸೇನೆಗಳು ಮಾತುಕತೆ ನಡೆಸಿ ಗಡಿಯಿಂದ ಸೇನೆ ಹಿಂಪಡೆಯುವ ನಿರ್ಧಾರವನ್ನು ಕೈಗೊಂಡಿತ್ತು.
ಇದರಂತೆ ಉಭಯ ರಾಷ್ಟ್ರಗಳು ಗಡಿಯಿಂದ ತಮ್ಮ ಸೈನ್ಯವನ್ನು ಹಿಂಪಡೆಯುತ್ತಿದ್ದು ಈ ನಡುವೆ ಚೀನಾ ಮತ್ತೆ ಷಡ್ಯಂತ್ರ ಮಾಡಿದ್ದು ಲಿಪುಲೇಖ್, ಅರುಣಾಚಲ ಪ್ರದೇಶ, ಸಿಕ್ಕಿಂನ ಉತ್ತರ ಪ್ರದೇಶಲ್ಲಿರುವ ಭಾರತ ಗಡಿಯಲ್ಲಿ ಭಾರಿ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಲು ಆರಂಭಿಸಿದೆ ಎಂದು ವರದಿಯಾಗಿದೆ.
ಇನ್ನು ಚೀನಾ ಸೇನೆ ನಿಯೋಜನೆ ಮಾಡಿದ ಹಿನ್ನೆಲೆ ಭಾರತವೂ ತನ್ನ ಸೇನಾ ಪಡೆಗಳನ್ನೂ ಅಲ್ಲಿಗೆ ರವಾನಿಸುತ್ತದೆ. ನಮ್ಮ ದೃಷ್ಟಿ ಚೀನಾ ಮಾತ್ರವಲ್ಲದೇ ನೇಪಾಳದ ಮೇಲೆಯೂ ಇದೆ ಎಂದು ಭಾರತದ ಉನ್ನತ ಸೇನಾದಿಕಾರಿಗಳು ತಿಳಿಸಿದ್ದಾರೆ.