ಲಖನೌ, ಆ. 02 (DaijiworldNews/MB) : ರಕ್ಷಾ ಬಂಧನ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಘೋಷಿಸಿದ್ದಾರೆ.
ಆಗಸ್ಟ್ 3 ರಂದು "ರಕ್ಷಾ ಬಂಧನ" ಆಚರಿಸಲಾಗುತ್ತಿದ್ದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಯುಪಿಎಸ್ಆರ್ಟಿಸಿ) ಬಸ್ಗಳಲ್ಲಿ ಆಗಸ್ಟ್ 2ರ (ಭಾನುವಾರ) ಮಧ್ಯರಾತ್ರಿಯಿಂದ ಆಗಸ್ಟ್ 3ರ (ಸೋಮವಾರ) ಮಧ್ಯರಾತ್ರಿವರೆಗೆ ಜಾರಿಯಲ್ಲಿ ಇರಲಿದ್ದು ರಕ್ಷಾಬಂಧನ ಸಲುವಾಗಿ ರಾಖಿ ಹಾಗೂ ಸಿಹಿತಿಂಡಿ ಮಾರಾಟ ಮಳಿಗೆಗಳು ಭಾನುವಾರ ತೆರೆದಿರುತ್ತವೆ ಎಂದು ಪ್ರಕಟಿಸಲಾಗಿದೆ.
ಇನ್ನು ಈ ಸಂದರ್ಭ ಪೊಲೀಸರಿಗೆ ಗಸ್ತು ಕಾರ್ಯಾಚರಣೆ ಹೆಚ್ಚಿಸಲು ಸೂಚಿಸಲಾಗಿದೆ.