ಚೆನ್ನೈ, ಆ 02(DaijiworldNews/HR): ನವೆಂಬರ್ 2019ರಲ್ಲಿ ನಡೆದ ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಪತ್ತೆಗೆ ಸಹಕರಿಸಿದ್ದ ಚೆನ್ನೈಯ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣಿಯನ್ ಈಗ ಚಂದ್ರಯಾನ-2 ನ ಪ್ರಗ್ಯಾನ್ ರೋವರ್ ಬಗ್ಗೆ ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ನಲ್ಲಿ ಸ್ಮೂತ್ ಲ್ಯಾಂಡಿಂಗ್ ಆಗುವುದಕ್ಕೆ ವಿಫಲಗೊಂಡು ಲ್ಯಾಂಡರ್ ಪತನಗೊಂಡಿದೆಯಾದರೂ ಪ್ರಗ್ಯಾನ್ ರೋವರ್ ಇನ್ನೂ ಜೀವಂತವಾಗಿದೆ ಹಾನಿಗೊಳಗಾಗಿಲ್ಲ ಎಂಬ ಖುಷಿ-ಅಚ್ಚರಿಯ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಲ್ಯಾಂಡರ್ ಪತನಗೊಂಡ ಸ್ಥಳದಿಂದ ಪ್ರಗ್ಯಾನ್ ರೋವರ್ ಕೆಲವು ಮೀಟರ್ ಗಳಷ್ಟು ದೂರ ಸಾಗಿದೆ. ಆದರೆ ಯೋಜಿತ ರೀತಿಯಲ್ಲಿ ನಡೆಯದೇ ವಿಕ್ರಮ್ ಲ್ಯಾಂಡರ್ ಸ್ಮೂತ್ ಲ್ಯಾಂಡಿಂಗ್ ವಿಫಲವಾದ ಕಾರಣ ಅದರ ಪೇಲೋಡ್ ಕಳಚಿಕೊಂಡಿದೆ.
ಚಂದ್ರನ ದಕ್ಷಿಣ ಧ್ರುವ ಬೆಳಕನ್ನು ಚೆನ್ನಾಗಿ ಹೊಂದಿಲ್ಲ. ಅಷ್ಟೇ ಅಲ್ಲದೇ ಲ್ಯಾಂಡರ್ ಸಹ ಮೇಲ್ಮೈ ನಿಂದ 2ms ನಷ್ಟು ಆಳದಲ್ಲಿತ್ತು ಹಾಗಾಗಿ ಆಂಗಲ್ ಆಫ್ ಇನ್ಸಿಡೆನ್ಸ್ ಕಾರಣದಿಂದಾಗಿ ಅದು ನವೆಂಬರ್ 11, 2019ರ ನಾಸಾ ಫ್ಲೈಬೈ ಕಣ್ಣಿಗೆ ಬಿದ್ದಿಲ್ಲ ಎಂದು ಷಣ್ಮುಗ ಹೇಳಿದ್ದಾರೆ.