ನವದೆಹಲಿ, ಆ 02 (DaijiworldNews/PY): ಭಾರತ-ಚೀನಾ ಸೇನೆಯ ಕಮಾಂಡರ್ ಮಟ್ಟದ ಸಭೆಯು ಇಂದು ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಇರುವ ಚೀನಾದ ಮೊಲ್ಡೊದಲ್ಲಿ ನಡೆಯಲಿದೆ ಎಂಬುದಾಗಿ ಸೇನೆಯ ಮೂಲಗಳು ಹೇಳಿವೆ.
ಭಾರತ-ಚೀನಾ ನಡುವೆ ನಡೆಯಲಿರುವ ಕಮಾಂಡರ್ ಮಟ್ಟದ ಈ ಸಭೆಯ ಇಂದು 11 ಗಂಟೆಗೆ ಪ್ರಾರಂಭವಾಗಲಿದ್ದು, ಚೀನಾ ಸೇನೆಯು ಪ್ರಸ್ತುತ ಬಿಕ್ಕಟ್ಟು ಸೃಷ್ಠಿಯಾಗಿರುವ ಪ್ರದೇಶದಿಂದ ಸಂಪೂರ್ಣವಾಗಿ ಹಿಂತಿರುಗುವತ್ತ ಭಾರತ ಗಮನಹರಿಸಲಿದೆ.
ಸೇನೆಯನ್ನು ಹಿಂತೆಗೆದುಕೊಳ್ಳುವ ಕಾರ್ಯವು ಪ್ರಗತಿಯಲ್ಲಿದೆ. ಆದರೆ, ಈ ಕಾರ್ಯ ಇನ್ನೂ ಸಂಪೂರ್ಣವಾಗಿಲ್ಲ. ಪೂರ್ವ ಲಡಾಕ್ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜನೆಗೊಂಡಿರುವ ಚೀನಾ ಸೇನೆಯನ್ನು ಅವರು ಹಿಂಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಗಡಿಯಲ್ಲಿ ಮತ್ತೆ ಶಾಂತಿ ಸ್ಥಾಪನೆಯಾಗಲಿದೆ ಎಂದು ಭಾವಿಸಿದ್ದೇವೆ ಎಂದು ಗುರುವಾರ ಭಾರತ ಹೇಳಿತ್ತು.
ಮೇ ತಿಂಗಳಿನಿಂದ ಭಾರತ-ಚೀನಾ ಸೇನೆಗಳು ನಿಯಂತ್ರಣ ರೇಖೆ ಸಮೀಪ ಬೀಡುಬಿಟ್ಟಿದೆ. ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳನ್ನು ರಾಜತಾಂತ್ರಿಕ ಮಾತುಕತೆ ನಡೆಸಿವೆ.