ಚಂಡೀಗಢ, ಆ 02 (DaijiworldNews/PY): ಚಂಡೀಗಢದ ಮಹಿಳೆಯರ ಗುಂಪೊಂದು ರಕ್ಷಾ ಬಂಧನ ಹಿನ್ನೆಲೆ ಹನುಮಾನ ಮಂದಿರಕ್ಕೆ ನೀಡುವ ಸಲುವಾಗಿ ಏಳು ಅಡಿ ಎತ್ತರದ ಪರಿಸರ ಸ್ನೇಹಿ ಶ್ರೀ ರಾಮನ ರಾಖಿಯೊಂದನ್ನು ತಯಾರು ಮಾಡಿದ್ದಾರೆ.
ಏಳು ಅಡಿ ಉದ್ದದ ರಾಖಿಯನ್ನು ಸ್ಥಳೀಯ ನಿವಾಸಿ ಮೀನಾ ತಿವಾರಿ ಅವರ ನೇತೃತ್ವದ ಮಹಿಳೆಯರ ಗುಂಪು ಕಳೆದ 15 ದಿನಗಳಿಂದ ಪ್ರತಿ ದಿನ ಎರಡರಿಂದ ಮೂರುಗಂಟೆಗಳವರೆಗೆ ಈ ರಾಖಿಯನ್ನು ತಯಾರು ಮಾಡುತ್ತಿದ್ದರು.
ಮೀನಾ ತಿವಾರಿ ಅವರ ನೇತೃತ್ವದ ತಂಡ ತಯಾರು ಮಾಡಿರುವ ಏಳು ಅಡಿ ಉದ್ದದ ರಾಖಿಯು ಶ್ರೀರಾಮನ ದೊಡ್ಡದಾದ ಭಾವಚಿತ್ರವನ್ನು ಒಳಗೊಂಡಿದೆ. ಅಲ್ಲದೇ, ಈ ವಿಶೇಷವಾದ ರಾಖಿಯನ್ನು ತಯಾರು ಮಾಡಲು ಅವರು ರುದ್ರಾಕ್ಷಿ, ಕೃತಕ ಹೂಗಳು, ರಿಬ್ಬನ್ಗಳು ಹಾಗೂ ಇನ್ನಿತರ ವಸ್ತುಗಳಿಂದ ಅಲಂಕಾರ ಮಾಡಿದ್ದಾರೆ.
ಈ ಬಗ್ಗೆ ತಿಳಿಸಿರುವ ಮೀನಾ ತಿವಾರಿ ಅವರು, ಪ್ರತೀ ವರ್ಷ ಕೂಡಾ ನಾವು ರಾಖಿಯನ್ನಯ ತಯಾರು ಮಾಡುತ್ತೇವೆ. ಈ ವರ್ಷ ನಾವು ವಿಶೇಷವಾದ ರಾಖಿಯನ್ನು ತಯಾರು ಮಾಡಿದ್ದೇವೆ. ಅಲ್ಲದೇ, ನಾವು ತಯಾರಿಸಿದ ಈ ವಿಶೇಷವಾದ ರಾಖಿಯನ್ನುಇಲ್ಲಿನ 32 ಅಡಿ ಉದ್ದದ ಹನುಮನ ಮೂರ್ತಿಯ ಬಲಗೈಗೆ ಕಟ್ಟುವುದೆಂದು ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.
ಈ ವರ್ಷದಂದು ಆಗಸ್ಟ್ 3 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.