ನವದೆಹಲಿ, ಆ 02 (DaijiworldNews/PY): ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮ ಮಂದಿರದ ಭೂಮಿ ಪೂಜೆ ನೆರವೇರಲಿದ್ದು, ಈ ನಿಟ್ಟಿನಲ್ಲಿ ಸೋದರರಿಬ್ಬರು 151 ನದಿಗಳಿಂದ ನೀರು ಸಂಗ್ರಹಣೆ ಹಾಗೂ ಮಣ್ಣನ್ನು ಸಂಗ್ರಹಿಸಿದ್ದಾರೆ.
ನಾವು 1968ರಿಂದ 151 ನದಿಗಳಿಂದ ನೀರು ಸಂಗ್ರಹಣೆ ಮಾಡಿದ್ದೇವೆ, 151 ನದಿಗಳ ಪೈಕಿ 8 ದೊಡ್ಡ ನದಿಗಳು ಸೇರಿದಂತೆ 3 ಸಮುದ್ರ ಹಾಗೂ ಶ್ರೀಲಂಕಾದ 16 ಸ್ಥಳಗಳಿಂದ ಮಣ್ಣನ್ನು ಸಂಗ್ರಹಣೆ ಮಾಡಿದ್ದೇವೆ ಎಂಬುದಾಗಿ ರಾಧೆ ಶ್ಯಾಮ್ ಪಂಡಿತ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಛತ್ತೀಸ್ಗಡದ ಫಯಾಸ್ ಖಾನ್ ಅವರು ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಪ್ರಯಾಣ ಪ್ರಾರಂಭಿಸಿದ್ದು, ಇವರು ಶ್ರೀರಾಮನ ಪರಮಭಕ್ತರಾಗಿದ್ದಾರೆ.
ನಾನು ಇಸ್ಲಾಂ ಧರ್ಮದವನಾಗಿರಬಹುದು. ಆದರೆ, ನನ್ನ ದೇವರು ರಾಮ. ರಾಮನ ಪರಮಭಕ್ತ ನಾನು. ಇನ್ನು ನಮ್ಮ ಪೂರ್ವಜರ ವಿಚಾರವನ್ನು ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅವರ ಹೆಸರೂ ಕೂಡಾ ರಾಮ್ಲಾಲ್ ಅಥವಾ ಶ್ಯಾಮ್ಲಾಲ್ ಎಂದಾಗಿರಬಹುದು. ನಾವೆಲ್ಲರೂ ಹಿಂದೂ ಮೂಲವನ್ನೇ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಕೋಟ್ಯಾಂತರ ಭಕ್ತರು ನಿರೀಕ್ಷಿಸುತ್ತಿದ್ದಾರೆ. ಇನ್ನು ದೇಶದ ವಿವಿಧ ಪ್ಯಣ್ಯ ಕ್ಷೇತ್ರಗಳಿಂದ ಪವಿತ್ರ ಜಲ ಹಾಗೂ ಮನ್ಣನ್ನು ಸಂಗ್ರಹಿಸಿ ರಾಮ ಮಂದಿರದ ಭೂಮಿ ಪೂಜೆಗಾಗಿ ತಲುಪಿಸುತ್ತಿದ್ದಾರೆ.