ನವದೆಹಲಿ, ಆ. 02 (DaijiworldNews/MB) : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಜುಲೈ 30 ರ ಗುರುವಾರ ಸಂಜೆ 7 ಗಂಟೆಗೆ 73 ವರ್ಷದ ಸೋನಿಯಾ ಗಾಂಧಿ ಅವರು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅವರ ಆರೋಗ್ಯ ಈಗ ಸ್ಥಿರವಾಗಿದ್ದು ಭಾನುವಾರ ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಾ.ಡಿ.ಎಸ್.ರಾಣಾ ಹೇಳಿದ್ದಾರೆ.
ಇನ್ನು ಸೋನಿಯಾ ಗಾಂಧಿ ಅವರು ರಾಜ್ಯ ಸಭಾ ಸಂಸದರೊಂದಿಗೆ ನಡೆಯಲಿರುವ ವರ್ಚೂವಲ್ ಸಭೆಯಲ್ಲಿ ಭಾಗಿಯಾಗಿಲಿದ್ದಾರೆ.