ಹಾಸನ, ಆ 3(DaijiworldNews/HR): ರಸ್ತೆ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ತಮ್ಮ ವಾಹನದಲ್ಲಿ ಕರೆತಂದು ಅಸ್ಪತ್ರೆ ಗೆ ದಾಖಲಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಿ ಟಿ ರವಿಯವರು ಮಾನವೀಯತೆ ಮೆರೆದಿದ್ದಾರೆ.
ಹಾಸನದ ಉದ್ದೂರು ಹರಳಳ್ಳಿ ಬಳಿ ನಡೆದಿದ್ದ ದ್ವಿ ಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾ ಹೀನರಾಗಿದ್ದ ಬಿದ್ದಿದ್ದ ಯುವತಿಯನ್ನು ತಮ್ಮ ವಾಹನದಲ್ಲಿ ಕರೆತಂದು,ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ ಸ್ವಲ್ಪ ಹೊತ್ತು ಅಲ್ಲಿದ್ದು ಆರೋಗ್ಯ ವಿಚಾರಿಸಿ ಬೆಂಗಳೂರಿಗೆ ತೆರಳಿದ್ದಾರೆ.
ಈ ಬಗ್ಗೆ ತಿಳಿಸಿರುವ ಸಚಿವರು, ಚಿಕ್ಕಮಂಗಳೂರಿನಿಂದ ಬರುತ್ತಿರುವಾಗ ದಾರಿ ಮಧ್ಯೆ ಯುವತಿ ಬಿದ್ದಿರುವುದನ್ನು ನೋಡಿ ಕರೆತಂದು ಆಸ್ಪತ್ರೆಗೆ ದಾಖಲು ಮಾಡಿದ್ದೇನೆ. ಇದೀಗ ಕೋವಿಡ್ ವಿಭಾಗಕ್ಕೆ ದಾಖಲಿಸಿ ಆರೋಗ್ಯ ವಿಚಾರಿಸಿ ಆರೈಕೆ ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.