ನವದೆಹಲಿ, ಆ. 03 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಬಂದ್ ಆಗಿದ್ದ ಜಿಮ್ಗಳನ್ನು ಆಗಸ್ಟ್ 5 ರಿಂದ ಪುನಃ ತೆರೆಯಲು ಅವಕಾಶ ನೀಡಿರುವ ಕೇಂದ್ರ ಸೋಮವಾರ ಅನ್ಲಾಕ್ 3 ರ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಮಾರ್ಗಸೂಚಿಯಂತೆ ಜಿಮ್ ಬರುವ ಎಲ್ಲರೂ ಆರೋಗ್ಯ ಸೇತು ಆಪ್ನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಕನಿಷ್ಟ 6 ಗಜ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದ್ದು ಜಿಮ್ನ ಪರಿಸರದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.
ಇನ್ನು ಜಿಮ್ಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ನಿರ್ದಿಷ್ಟವಾದ ಪ್ರವೇಶ ಸ್ಥಳವನ್ನು ಗುರುತಿಸಬೇಕು. ಹಾಗೆಯೇ 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಯಾವುದೇ ಅಸ್ವಸ್ಥತೆ ಇರುವವರು, ಮಕ್ಕಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗೆಯೇ ಕಂಟೈನ್ಮೆಂಟ್ ವಲಯದಲ್ಲಿ ವಾಸಿಸುವವರಿಗೆ ಜಿಮ್ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಇನ್ನು ಜಿಮ್ಗೆ ಬರುವ ಹಾಗೂ ಹೋಗುವವರನ್ನು ನಿಯಂತ್ರಿಸುವ ಉದ್ದೇಶದಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಧ ಬ್ಯಾಚ್ಗಳನ್ನು ಮಾಡಬೇಕು. ಪ್ರತಿಯೊಂದು ಬ್ಯಾಚ್ ಮಧ್ಯೆ 15ರಿಂದ 30 ನಿಮಿಷಗಳ ಅಂತರವಿರಬೇಕು. ಈ ಸಮಯದಲ್ಲಿ ಜಿಮ್ನ್ನು ಸ್ವಚ್ಛಗೊಳಿಸಿ ಸ್ಯಾನಿಟೈಝ್ ಮಾಡಬೇಕು ಎಂದು ಕೇಂದ್ರ ತಿಳಿಸಿದೆ.
ಹಾಗೆಯೇ ವ್ಯಕ್ತಿಗೆ ಉಸಿರಾಟ ಪ್ರಮಾಣ ಶೇ.95ಕ್ಕಿಂತ ಕೆಳಮಟ್ಟದಲ್ಲಿದ್ದರೆ ಅವರಿಗೆ ಜಿಮ್ ಮಾಡಲು ಅವಕಾಶ ನೀಡಬೇಡಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.