ಅಯೋಧ್ಯೆ, ಆ. 05 (DaijiworldNews/MB) : ಐತಿಹಾಸಿಕ ಕ್ಷಣವಾದ ರಾಮ ಮಂದಿರ ಭೂಮಿ ಪೂಜೆಯನ್ನು ಕಣ್ತುಂಬಿಕೊಳ್ಳಲು ದೇಶಾದಾದ್ಯಂತ ಭಕ್ತರು ಕಾತುರರಾಗಿದ್ದು ಈ ದಿನವನ್ನು ಒಂದು ಮಹೋತ್ಸವದ ರೀತಿಯಲ್ಲಿ ಸಂಭ್ರಮಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ದೀಪ ಮೊದಲಾದವುಗಳಿಂದ ಅಲಂಕಾರ ಮಾಡಲಾಗಿದ್ದು ಅಯೋಧ್ಯೆ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ.
ಮಧ್ಯಾಹ್ನ 12:30 ರ ಆಸುಪಾಸಿನಲ್ಲಿ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದಕ್ಕೂ ಮೊದಲು ಮಂಗಳವಾರದಿಂದಲ್ಲೆ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ.
ಆ.04 ರ ಸಂಜೆ ದೀಪೋತ್ಸವ, ದೀಪ ಅಲಂಕಾರಗಳಿಂದ ಅಯೋಧ್ಯೆ, ವಿಶೇಷವಾಗಿ ಸರಯೂ ನದಿ ಬಳಿ ಇರುವ ಘಾಟ್ ಗಳು ಕಂಗೊಳಿಸುತ್ತಿದ್ದವು. ಅಯೋಧ್ಯೆ ಮಾತ್ರವಲ್ಲೇ ದೇಶದ ವಿವಿಧ ದೇವಾಲಯಗಳಲ್ಲಿ ದೀಪೋತ್ಸವ ನಡೆದಿದ್ದು ವಿಶೇಷ ಅಲಂಕಾರ ಮಾಡಲಾಗಿದೆ.
ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯ ಸಲುವಾಗಿ ರಾಮನ ಪತ್ನಿ ಸೀತಾಮಾತೆಯ ಜನ್ಮ ಸ್ಥಳವಾದ ನೇಪಾಳದಲ್ಲಿಯೂ ಪಶುಪತಿನಾಥ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಲಾಗುತ್ತಿದೆ.
ಇನ್ನು ರಾಮ ಮಂದಿರ ಪೂಜೆಯ ಹಿನ್ನೆಲೆ ದೇಶಾದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.