ನವದೆಹಲಿ, ಆ. 05 (DaijiworldNews/MB) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಇಂದು ನಡೆಯಲಿದ್ದು ಇದರ ಭಾಗವಾಗಿ ದೇಶದಾದ್ಯಂತ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಈ ಬಗ್ಗೆ ಗಣ್ಯ ವ್ಯಕ್ತಿಗಳು ಅಭಿಪ್ರಾಯ - ಶುಭಕೋರುವ ಸಂದೇಶಗಳನ್ನು ನೀಡುತ್ತಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಮಾತಾ ಅಮೃತಾನಂದಮಯಿ ಅವರು, ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯುತ್ತಿರುವುದು ಇತಿಹಾಸದಲ್ಲಿ ಹೊಸ ಯುಗವೊಂದರ ಆರಂಭದ ಕ್ಷಣವಾಗಿದ್ದು ಇದು ಯಾರ ಗೆಲುವೂ ಸೋಲು ಅಲ್ಲ. ಬದಲಾಗಿ ಪರಸ್ಪರ ಪ್ರೀತಿ, ತಾಳ್ಮೆಯಿಂದ ಇರುವ ವಿಶಾಲ ಮನೋಭಾವದ ಗೆಲುವು ಎಂದು ನುಡಿದಿದ್ದಾರೆ.
ಹಾಗೆಯೇ ಈ ಪ್ರೀತಿ, ತಾಳ್ಮೆಯ ಗುಣ ಎಂದಿಗೂ ಶಾಶ್ವತವಾಗಿದ್ದು, ದೇವರ ಅನುಗ್ರಹ ಎಲ್ಲರ ಮೇಲೆ ಇರಲಿ ಎಂದು ಮಾತಾ ಅಮೃತಾನಂದಮಯಿಯವರು ಹಾರೈಸಿದ್ದಾರೆ.