ಅಯೋಧ್ಯೆ, ಆ 05 (DaijiworldNews/PY): ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮುನ್ನ, ಆಗಸ್ಟ್ 5 ಐತಿಹಾಸಿಕ ದಿನ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ರಾಮ್ದೇವ್ ಅವರು, ಮಂಗಳವಾರ ಮಧ್ಯಾಹ್ನ ಅಯೋಧ್ಯೆಗೆ ತಲುಪಿದ್ದಾರೆ.
ರಾಮ್ದೇವ್ ಅವರು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಇಂದು ಮುಂಜಾನೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ 5 ಐತಿಹಾಸಿ ದಿನವಾಗಿದೆ. ಈ ಐತಿಹಾಸಿಕ ದಿನವನ್ನು ತಲೆಮಾರುಗಳು ಬಹಳ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಇದು ಎಲ್ಲಾ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯಗಳ ಅತಿಕ್ರಮಣದ ಅಂತ್ಯವಾಗಿರುತ್ತದೆ. ರಾಮ್ ದೇವಾಲಯದ ಸ್ಥಾಪನೆಯು ದೇಶದಲ್ಲಿ ಹೊಸ ಸಂಸ್ಕೃತಿಯನ್ನು ಆರಂಭಿಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನ ಮಂತ್ರಿ ಇರುವುದು ನಮ್ಮ ದೇಶದ ಅದೃಷ್ಟವಾಗಿದೆ. ಅವರು ರಾಮ ಮತ್ತು ಹನುಮನ ಭಕ್ತ. ಪ್ರಧಾನಿ ಅವರು ಹಿಂದೂ ಧರ್ಮ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಏತನ್ಮಧ್ಯೆ, ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದ್ದು, ರಾಮ ಮಂದಿರದ ಭೂಮಿ ಪೂಜೆಗೂ ಮೊದಲು ಗರ್ಹಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ.