ಚೆನ್ನೈ, ಆ 05 (DaijiworldNews/PY): ಕೊಯಮತ್ತೂರಿನ ಚಿಕಣಿ ಕಲಾವಿದರೊಬ್ಬರು 1.2 ಗ್ರಾಂ ಚಿನ್ನ ಬಳಸಿ ಒಂದು ಇಂಚಿನ ಶ್ರೀರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.
ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಇಂದು ರಾಮ ಮಂದಿರದ ಭೂಮಿಪೂಜೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ಅವರು ರಾಮನ ಪ್ರತಿಮೆಯನ್ನು ತಯಾರು ಮಾಡಿದ್ದಾರೆ.
1.2 ಗ್ರಾಂ ಚಿನ್ನವನ್ನು ಬಳಸಿ ಒಂದಿ ಇಂಚಿನ ರಾಮನ ಪ್ರತಿಮೆಯನ್ನು ತಯಾರು ಮಾಡಿರುವ ಮರಿಯಪ್ಪನ್ ಅವರು ಸ್ವತಃ ತಮ್ಮ ಕೈಯಾರೆ ತಯಾರಿಸಿದ್ದಾರೆ. ಇಂದು ರಾಮ ಮಂದಿರ ಭೂಮಿಪೂಜೆ ನೆರವೇರಲಿದ್ದು, ಇದಕ್ಕಾಗಿ 1.2ಗ್ರಾಂನ ಒಂದು ಇಂಚಿನ ರಾಮನ ಪ್ರತಿಮೆಯನ್ನು ತಯಾರು ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕವಾಗಿದೆ. ಈ ಸಂದರ್ಭವನ್ನು ಗುರುತಿಸಲು ನಾನು 1.2 ಗ್ರಾಂ ಚಿನ್ನವನ್ನು ಬಳಸಿ ಶ್ರೀರಾಮನ ಒಂದಿ ಇಂಚಿನ ಪ್ರತಿಮೆಯನ್ನು ತಯಾರಿಸಿದ್ದೇನೆ. ಈ ಪ್ರತಿಮೆಯನ್ನು ರಾಮಮಂದಿರದ ಟ್ರಸ್ಟ್ಗೆ ಕಳುಹಿಸುತ್ತೇನೆ ಎಂದು ಮರಿಯಪ್ಪನ್ ಅವರು ಹೇಳಿದ್ದಾರೆ.