ಅಯೋಧ್ಯೆ, ಆ. 05 (DaijiworldNews/MB) : ರಾಮ ಮಂದಿರ ಭೂಮಿ ಪೂಜೆ ಇಂದು ನಡೆಯಲಿದ್ದು ಟ್ವೀಟರ್ನಲ್ಲಿ ಬುಧವಾರ ಬೆಳಿಗ್ಗೆಯಿಂದಲ್ಲೇ #पधारो_राम_अयोध्या_धाम, #JaiShriRam, श्री राम, #BabriZindaHai, #RamMandir, #Ayodhya, Ram Janambhoomi, Ram Temple, #LandOfRavanan, #TrueBlessings, #रामराज्य_उद्घोष, #BabriMasjid, #राममंदिर_से_रामराज्य ಎಂಬ ಹ್ಯಾಷ್ಟ್ಯಾಗ್ಗಳು ಟ್ರೆಂಡ್ ಆಗಿವೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಭಗವಾನ್ ಶ್ರೀರಾಮ ಎಲ್ಲರಿಗೂ ನ್ಯಾಯ, ನೀತಿವಂತ ನಡವಳಿಕೆ, ನ್ಯಾಯಸಮ್ಮತತೆ, ನೈತಿಕತೆ ಮತ್ತು ಧೈರ್ಯವನ್ನು ನಿರೂಪಿಸುತ್ತಾರೆ. ಕರಾಳ ಕಾಲದಲ್ಲಿ ಈ ಮೌಲ್ಯಗಳು ಹೆಚ್ಚು ಅಗತ್ಯವಾಗಿವೆ. ರಾಮ ರಾಜ್ಯವು ವಿಜಯೋತ್ಸವದ ಧರ್ಮಾಂಧತೆಗೆ ಒಂದು ಸಂದರ್ಭವಾಗುವುದಿಲ್ಲ ಎಂದು ಟ್ವಿಟ್ ಮಾಡಿದ್ದು ಜೈ ಶ್ರೀ ರಾಮ್ ಹ್ಯಾಷ್ ಟ್ಯಾಗ್ನ್ನು ಉಲ್ಲೇಖಿಸಿದ್ದಾರೆ.
ಹಾಗೆಯೇ ಟೀಮ್ ಕಂಗನಾ ರಣಾವತ್ ಕೂಡಾ ತನ್ನ ಟ್ವೀಟ್ನಲ್ಲಿ ಜೈ ಶ್ರೀ ರಾಮ್ ಮೊದಲಾದ ಹ್ಯಾಷ್ ಟ್ಯಾಗ್ಗಳನ್ನು ಬಳಸಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಟ್ವೀಟರ್ನಲ್ಲಿ #JaiShriRam, श्री राम, ಮೊದಲಾದ ಹ್ಯಾಷ್ಟ್ಯಾಗ್ಗಳನ್ನು ಬಳಸುತ್ತಿದ್ದಾರೆ.