ಭೋಪಾಲ್, ಆ 05 (DaijiworldNews/PY): ರಾಮ ಮಂದಿರ ನಿರ್ಮಾಣವಾಗುವವರೆಗೂ ನಾನು ಆಹಾರ ಸೇವನೆ ಮಾಡುವುದಿಲ್ಲ ಎಂದು ದೀಕ್ಷೆ ಸ್ವೀಕಾರ ಮಾಡಿರುವ ಮಧ್ಯಪ್ರದೇಶದ ಜಬಲ್ಪುರದ ನಿವಾಸಿ ಊರ್ಮಿಳಾ ಚತುರ್ವೇದಿ (82) ಅವರು ಕಳೆದ 28 ವರ್ಷಗಳಿಂದ ಉಪವಾಸ ಮಾಡುತ್ತಿದ್ದಾರೆ.
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಕಳೆದ ವರ್ಷ ಅನುಮತಿ ದೊರೆತ ಸಂದರ್ಭ ಊರ್ಮಿಳಾ ಅವರು ಸಂತಸಗೊಂಡಿದ್ದರು. ಇವರು ಕಳೆದ 28 ವರ್ಷಗಳಿಂದ ಉಪವಾಸ ಮಾಡುತ್ತಿದ್ದು, ರಾಮಮಂದಿರದ ಪ್ರಸಾದ, ಹಾಲು, ಮೊಸರು ಹಾಗೂ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರೆ.
ರಾಮ ಮಂದಿರದ ಶಿಲಾನ್ಯಾಸದ ಬಳಿಕ ಅಯೋಧ್ಯೆಗೆ ತೆರಳಿ, ಬಳಿಕ ಪವಿತ್ರವಾದ ನದಿಯಲ್ಲಿ ಶುದ್ದಿಯಾದ ನಂತರ ದೀಕ್ಷೆಯಿಂದ ವಿರಮಿಸುವುದಾಗಿ ಊರ್ಮಿಳಾ ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿದ್ದು, ಶ್ರೀ ರಾಮಚಂದ್ರ ಕೃಪಾಳ್ ಭಜೆಮನ್ ಹರಣ್ ಭವಭಯ್ ದಾರುಣಂ. ಪ್ರಭು ಶ್ರೀರಾಮ ಭಕ್ತರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ, ಅವಳು ತ್ರೇತಾಯುಗನ ತಾಯಿಯಾಗಲಿ ಅಥವಾ ಇಂದಿನ ತಾಯಿಯಾಗಲಿ!. ಧನ್ಯವಾದಗಳು, ತಾಯಿ! ಇಡೀ ದೇಶವೇ ನಿಮ್ಮ ಭಕ್ತಿಗೆ ವಂದನೆ ಸಲ್ಲಿಸಿದೆ. ಜೈ ಶ್ರೀರಾಮ್ ಎಂದಿದ್ದಾರೆ.