ಅಯೋಧ್ಯೆ, ಆ. 05 (DaijiworldNews/MB) : ಬುಧವಾರ ರಾಮ ಮಂದಿರ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ''ದೇಶಕ್ಕೆ ಇದು ಭಾವನಾತ್ಮಕ ಕ್ಷಣ, ಪ್ರತಿ ಹೃದಯವು ಪ್ರಕಾಶಿಸಿದೆ'' ಎಂದು ಹೇಳಿದ್ದಾರೆ.
''ಈ ಸಂದರ್ಭದಲ್ಲಿ ದೇಶದ ಪ್ರತಿ ಹೃದಯವು ಪ್ರಕಾಶಿಸುತ್ತಿದ್ದು ಇದು ದೇಶಕ್ಕೆ ಭಾವನಾತ್ಮಕ ಕ್ಷಣ. ಬಹು ಕಾಲದಿಂದ ಕಾಯುತ್ತಿದ್ದ ದಿನ ಇಂದು ಮುಕ್ತಾಯ ಕಂಡಿದೆ. ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ನಮ್ಮ ರಾಮ ಲಲ್ಲಾನಿಗೆ ಭವ್ಯ ರಾಮ ಮಂದಿರವು ನಿರ್ಮಾಣವಾಗುತ್ತದೆ'' ಎಂದು ನುಡಿದಿದ್ದಾರೆ.
''ಈ ರಾಮ ಮಂದಿರ ನಿರ್ಮಾಣದಿಂದಾಗಿ ಬರೀ ಇತಿಹಾಸ ನಿರ್ಮಾಣವಾಗುವುದಿಲ್ಲ ಬದಲಾಗಿ ಇತಿಹಾಸ ಪುನಾರಾವರ್ತನೆಯಾಗುತ್ತದೆ. ಭಗವಂತ ರಾಮನಿಗೆ ಬುಡಕಟ್ಟು ಜನಾಂಗ, ಮೀನುಗಾರರು ಸಹಾಯ ಮಾಡಿದ್ದಂತೆ, ಭಗವಂತ ಕೃಷ್ಣನಿಗೆ ಮಕ್ಕಳು ಗೋವರ್ಧನ ಪರ್ವತ ಎತ್ತಲು ಸಹಾಯ ಮಾಡಿದ್ದಂತೆ, ನಮ್ಮೆಲ್ಲರ ಸಹಾಯದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗುತ್ತದೆ'' ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೂ ಮೊದಲು ಭೂಮಿ ಪೂಜೆಯನ್ನು ನೆರವೇರಿಸಿದರು.