ಅಯೋಧ್ಯೆ, ಆ 05 (DaijiworldNews/PY): ರಾಮ ದೇವಾಲಯದ ನಿರ್ಮಾಣಕ್ಕಾಗಿ 500 ವರ್ಷಗಳಿಂದ ಕಾದಿದ್ದು, ಇದೀಗ ಶಾಂತಿಯುತ ರೀತಿಯಲ್ಲಿ ಸಾಕಾರಗೊಂಡಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.
ಬುಧವಾರ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜನ್ ಬಗ್ಗೆ ಮಾತನಾಡಿದ ಅವರು, ಈ ಐತಿಹಾಸಿಕ ದಿನಕ್ಕಾಗಿ 500 ವರ್ಷಗಳ ಕಾಲ ಕಾದಿದ್ದೇವೆ. ಇದು ಪ್ರಧಾನಿ ಮೋದಿ ಅವರಿಂದಾಗಿ ಸಾಕಾರಗೊಂಡಿದೆ. ಭಾರತದ 135 ಕೋಟಿ ಜನರು ಮತ್ತು ಸನಾತನ ಧರ್ಮ ಅನುಯಾಯಿಗಳ ಹಿತೈಷಿಗಳ ಆಶಯಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ಶಾಂತಿಯೊಂದಿಗೆ ಸಮಸ್ಯೆಗಳನ್ನು ಪರಿಹಾರಮಾಡಿವೆ. ರಾಮ ಜನ್ಮಭೂಮಿ ವಿಷಯದ ಶಾಂತಿಯುತ ನಿರ್ಣಯದಲ್ಲಿನ್ಯಾಯಾಂಗ ಹಾಗೂ ಕಾರ್ಯನಿರ್ವಾಹಕಗಳು ಪ್ರಮುಖ ಪಾತ್ರ ವಹಿಸಿದೆ ಎಂದರು.
ರಾಮ ದೇವಾಲಯ ನಿರ್ಮಾಣಕ್ಕಾಗಿ 500 ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. 500 ವರ್ಷಗಳ ಈ ಹೋರಾಟದಲ್ಲಿ, ಅನೇಕ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಶಾಂತಿಯುತ ವಿಧಾನಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ ಎನ್ನುವುದನ್ನು ಪ್ರಧಾನಿ ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ನಾವು ಸಂವಿಧಾನದ ನಿಯಮಗಳನ್ನು ಅನುಸರಿಸುತ್ತಿರುವ ಕಾರಣ ರಾಮ ಮಂದಿರದ ಕನಸನ್ನು ಈಡೇರಿಸಿದ್ದೇವೆ ಎಂದರು.
ಇದು 3 ವರ್ಷಗಳ ಹಿಂದೆ ದೀಪೋತ್ಸವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಪ್ರಧಾನಿ ಮೋದಿ ಅವರು ದೇವಸ್ಥಾನಕ್ಕಾಗಿ ಭೂಮಿ ಪೂಜೆ ನಡೆಸಿದರು. ಅಲ್ಲದೇ, ನಾನು ಅಯೋಧ್ಯೆಯ ಈ ಕಾರ್ಯಕ್ರಮಕ್ಕಾಗಿ ಆರ್ಎಸ್ಎಸ್ ಮುಖ್ಯಸ್ಥರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲವು ಮುಖ್ಯವಾದ ಅತಿಥಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಘೋಷಣೆಯೊಂದಿಗೆ, ಶ್ರೀರಾಮ ಮಂದಿರವು ಭಾರತದ ಹೆಮ್ಮೆಯನ್ನು ಹೆಚ್ಚಿಸುತ್ತದೆ ಎಂದರು.