ನವದೆಹಲಿ, ಆ 06 (DaijiworldNews/PY): ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯು ಪಕ್ಷಪಾತದ, ರಾಜಕೀಯ ಉದ್ದೇಶಗಳಿಗಾಗಿ ಜನರ ಧಾರ್ಮಿಕ ಭಾವನೆಗಳ ಬೆತ್ತಲೆ ಶೋಷಣೆಯಾಗಿದೆ ಎಂದು ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭೂಮಿಪೂಜೆಯ ಕಾರ್ಯಕ್ರಮವು ಪಕ್ಷಪಾತದ, ರಾಜಕೀಯ ಉದ್ದೇಶಗಳಿಗಾಗಿ ಜನರ ಧಾರ್ಮಿಕ ಭಾವನೆಗಳ ಬೆತ್ತಲೆ ಶೋಷಣೆಯಾಗಿದೆ. ಇದು ಭಾರತೀಯ ಸಂವಿಧಾನದ ಮತ್ತು ಮನೋಭಾವವನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.
ದೇಶವು ರಾಜ್ಯಪಾಲರ ಸಮ್ಮುಖದಲ್ಲಿ ದೇವಾಲಯದ ನಿರ್ಮಾಣದ ಕಾರ್ಯವನ್ನು ವಹಿಸಿಕೊಂಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಪ್ರಜಾಪ್ರಭುತ್ವದ ಸ್ವರೂಪವನ್ನು ನಿರಾಕರಿಸಿದ್ದಾರೆ. ದೇವಾಲಯದ ನಿರ್ಮಾಣದ ಕಾರ್ಯವನ್ನು ಟ್ರಸ್ಟ್ ವಹಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಈ ಭೂಮಿಪೂಜೆಯು ಬಾಬರಿ ಮಸೀದಿ ದ್ವಂಸಕ್ಕೆ ಹಿಂದಿನ ಕಾನೂನುಬದ್ಧತೆಯನ್ನು ಒದಗಿಸಿತು. ಇದು ಅತಿಯಾದ ಕಾನೂನಿನ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಅಲ್ಲದೇ, ಬಾಬರಿ ಮಸೀದಿ ದ್ವಂಸ ಮಾಡಿರುವವರಿಗೆ ಶಿಕ್ಷೆ ನೀಡಬೇಕೆಂದು ಕರೆ ನೀಡಿತ್ತು. ಆದರೆ, ಅಂತಹ ಯಾವುದೇ ಶಿಕ್ಷೆಯಾಗದೇ ಇದೀಗ ರಾಮ ಮಂದಿರದ ನಿರ್ಮಾಣ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಭೂಮಿಪೂಜೆಯ ದೃಶ್ಯವು ದೂರದರ್ಶನದಲ್ಲಿ ಪ್ರಸಾರವಾಗಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದಿದ್ದಾರೆ.
ನಮ್ಮ ಕಾನೂನು ವ್ಯವಸ್ಥೆಯು ಪ್ರತಿಯೊಬ್ಬ ನಾಗರಿಕನ ನಂಬಿಕೆ ಹಾಗೂ ಆಯ್ಕೆಯನ್ನು ರಕ್ಷಿಸುತ್ತದೆ. ದೇಶವು ಎಲ್ಲಾ ನಾಗರಿಕ ಆಯ್ಕೆಯನ್ನು ರಕ್ಷಿಸಬೇಕು. ದೇಶಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯನ್ನು ನೆರವೇರಿಸಿದರು.
ರಾಮ ಮಂದಿರದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 9 ರಂದು ತೀರ್ಪು ನೀಡಿತ್ತು.