ಬೆಂಗಳೂರು, ಆ. 06(DaijiworldNews/HR): ಆಗಸ್ಟ್ ೫ರಂದು ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ ಪೂರ್ಣಗೊಂಡಿದ್ದು ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಲ್ಲೇ ಇದೆ. ಈ ನಡುವೆ ರಾಮಮಂದಿರ ಚಳುವಳಿ ಕಾಂಗ್ರೆಸ್ಸಿಗೆ ಸೇರಿದ್ದಲ್ಲ ಎಂದು ಸಚಿವ ಸಿ ಟಿ ರವಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ಸಿನವರು ರಾಮ ಎಲ್ಲರಿಗೂ ಸೇರಿದವನು ಎಂದು ಹೇಳುತ್ತಿದ್ದಾರೆ ನಿಜ, ರಾಮ ಎಲ್ಲರಿಗೂ ಸೇರಿದವನು ಆದರೆ ರಾಮಮಂದಿರ ಚಳುವಳಿ? ಅದು ಕಾಂಗ್ರೆಸ್ಸಿಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
ಇನ್ನು ಒಮ್ಮೆ ಮಸೀದಿ ಕಟ್ಟಿದರೆ ಅದು ಎಂದೆಂದಿಗೂ ಮಸೀದಿಯೇ ಎಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವರು, ಒಮ್ಮೆ ದೇವಸ್ಥಾನ ನಿರ್ಮಾಣವಾಗಿದ್ದರೆ? ಅದು ಎಂದೆಂದಿಗೂ ದೇವಸ್ಥಾನ ತಾನೇ? ಆಕ್ರಮಣಕಾರರು ಧ್ವಂಸ ಮಾಡಿದ ಎಲ್ಲವೂ ಮುಕ್ತವಾಗಲೇ ಬೇಕು.ಕಾಶಿ, ಮಥುರಾ ಸೇರಿ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಪ್ರವಾಸೋಧ್ಯಮ ಸಚಿವ ಸಿ ಟಿ ರವಿ ಕಿಡಿಕಾರಿದ್ದಾರೆ.