ನವದೆಹಲಿ, ಆ. 06 (DaijiworldNews/MB) : ''ಮಸೀದಿ ನಿರ್ಮಾಣಕ್ಕಾಗಿ ಮಂದಿರ ನೆಲಸಮ ಮಾಡಲಾಗುವುದು'' ಎಂದು ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಗುರುವಾರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಬುಧವಾರವಷ್ಟೇ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆದಿದ್ದು ಈಗ ಇಮಾಮ್ ಅಧ್ಯಕ್ಷರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
''ವಿವಾದಿತ ಸ್ಥಳದಲ್ಲಿ ದೇವಾಲಯವನ್ನು ಧ್ವಂಸ ಮಾಡಿ ಬಾಬರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿಲ್ಲ'' ಎಂದು ಪ್ರತಿಪಾದಿಸಿದ ಅವರು, ''ದೇವಾಲಯವನ್ನು ನೆಲಸಮ ಮಾಡಿ ಮಸೀದಿ ನಿರ್ಮಿಸಲಾಗುವುದು'' ಎಂದು ಹೇಳಿದ್ದಾರೆ.
''ಇಸ್ಲಾಂ ಧರ್ಮವು ಮಸೀದಿ ಎಂದಿಗೂ ಮಸೀದಿಯಾಗಿರುತ್ತದೆ ಎಂದು ಹೇಳುತ್ತದೆ. ಬೇರೆ ಯಾವುದರ ನಿರ್ಮಾಣಕ್ಕಾಗಿಯೂ ಅದನ್ನು ನಾಶ ಮಾಡಲಾಗುವುದಿಲ್ಲ. ನಾವು ಅದು ಮಸೀದಿಯಾಗಿತ್ತು ಮತ್ತು ಮಸೀದಿಯಾಗಿರುತ್ತದೆ ಎಂದು ನಂಬುತ್ತೇವೆ. ದೇವಾಲಯವನ್ನು ನೆಲಸಮಗೊಳಿಸಿದ ನಂತರ ಮಸೀದಿಯನ್ನು ನಿರ್ಮಿಸಲಾಗಿಲ್ಲ. ಆದರೆ ಆದರೆ ಈಗ ಮಸೀದಿ ನಿರ್ಮಿಸಲು ದೇವಾಲಯವನ್ನು ನೆಲಸಮಗೊಳಿಸಬಹುದು'' ಎಂಬ ಹೇಳಿಕೆ ನೀಡಿದ್ದಾರೆ.
''ಹಾಗೆಯೇ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ'' ಎಂದು ಕೂಡಾ ಆರೋಪ ಮಾಡಿದ್ದಾರೆ.
ನಿನ್ನೆಯಷ್ಟೇ ರಾಮ ಮಂದಿರ ಭೂಮಿ ಪೂಜೆ ನಡೆದಿದ್ದು ಸುಮಾರು ಮೂರು ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣವಾಗುವ ನಿರೀಕ್ಷೆಯಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಈ ಭೂಮಿ ರಾಮ ಲಲ್ಲಾಗೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ಟ್ರಸ್ಟ್ ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತು.
ಈ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ ಎಂದು ಅಖಿಲ ಭಾರತ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಟ್ವೀಟ್ ಮಾಡಿದ್ದರು.