ಮುಂಬೈ, ಆ 06 (DaijiworldNews/PY): ರಾಮ ಮಂದಿರ ಭೂಮಿಪೂಜೆಯ ನಿರ್ಮಾಣದ ದಿನ ಐತಿಹಾಸಿಕವಾಗಿದೆ. ಭಗವಾನ್ ಶ್ರೀರಾಮನ ಸೌಂದರ್ಯ ಅವನ ಹೆಸರಿನಲ್ಲಿ ಇಲ್ಲ. ಅವನ ವ್ಯಕ್ತಿತ್ವದಲ್ಲಿದೆ. ಶ್ರೀರಾಮ ಎಂದರೆ ವಿಜಯದ ಸಂಕೇತ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಮ ಮಂದಿರ ಭೂಮಿಪೂಜೆಯ ನಿರ್ಮಾಣದ ದಿನ ಐತಿಹಾಸಿಕವಾಗಿದೆ. ಭಗವಾನ್ ಶ್ರೀರಾಮನ ಸೌಂದರ್ಯ ಅವನ ಹೆಸರಿನಲ್ಲಿ ಇಲ್ಲ. ಅವನ ವ್ಯಕ್ತಿತ್ವದಲ್ಲಿದೆ. ಶ್ರೀರಾಮ ಎಂದರೆ ವಿಜಯದ ಸಂಕೇತವಾಗಿದೆ. ಪ್ರಪಂಚಾದಾತ್ಯಂತ ಆತನ ಸಂತೋಷದ ಅಲೆ ಇದೆ. ಇದು ಬಹಳ ತೃಪ್ತಿಯ ಕ್ಷಣವಾಗಿದೆ ಎಂದಿದ್ದಾರೆ.
ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದರು.
ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮಕ್ಕೆ 175 ಅತಿಥಿಗಳು ಸೇರಿದಂತೆ 135 ಮಂದಿ ಸಾಧುಗಳು ಪಾಲ್ಗೊಂಡಿದ್ದರು.
ರಾಮ ಮಂದಿರದ ಭೂಮಿಪೂಜೆಯ ಸಂಭ್ರಮದ ಕ್ಷಣವು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ನ ಬಿಲ್ಬೋರ್ಡ್ನಲ್ಲಿ ಪ್ರದರ್ಶನವಾಗಿತ್ತು.
ಏತನ್ಮಧ್ಯೆ, ರಾಮ ಮಂದಿರದ ಭೂಮಿಪೂಜೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರ ದಾನಿಶ್ ಕನೇರಿಯಾ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.