ನವದೆಹಲಿ, ಆ 06 (DaijiworldNews/PY): ಉದ್ಯಮಿ ವಿಜಯ್ ಮಲ್ಯ ಅರ್ಜಿ ಪರಿಶೀಲನೆಯನ್ನು ಆಗಸ್ಟ್ 20ಕ್ಕೆ ಕೋರ್ಟ್ ಮುಂದೂಡಿದ್ದು, ಇದಕ್ಕೆ ಸುಪ್ರೀಂ ಕೋರ್ಟ್ನಲ್ಲಿದ್ದ ದಾಖಲೆಗಳ ಪೈಕಿ ಒಂದು ದಾಖಲೆ ಮಾಯವಾಗಿರುವುದು ಕಾರಣವಾಗಿದೆ.
ಇಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ಮಾಡಬೇಕಿತ್ತು. ಆದರೆ, ದಾಖಲೆಯೊಂದು ನಾಪತ್ತೆಯಾದ ಕಾರಣ ವಿಚಾರಣೆಯನ್ನು ಮುಂದೂಡಿದೆ.
2017ರಲ್ಲಿ ವಿಜಯ್ ಮಲ್ಯ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸಿದ್ದು, ಅಲ್ಲದೇ, ಸುಪ್ರೀಂನ ಆದೇಶವನ್ನು ಉಲ್ಲಂಘನೆ ಮಾಡಿ ಆಸ್ತಿಯನ್ನು ತಮ್ಮ ಕುಟುಂಬಕ್ಕೆ ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಯೊಂದು ಲಭ್ಯವಾಗಿಲ್ಲದ ಕಾರಣ, ಇಂದು ನಡೆಯಬೇಕಿದ್ದ ಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ.
ಮಲ್ಯ ಅವರು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ 40 ಮಿಲಿಯನ್ ಡಾಲರ್ ಹಣವನ್ನು ತಮ್ಮ ಮಕ್ಕಳಿಗೆ ಅಕ್ರಮವಾಗಿ ವರ್ಗಾಯಿಸಿದ್ದರು ವಿವಿಧ ಬ್ಯಾಂಕುಗಳು ದೂರಿದ್ದವು. ಈ ಕಾರಣದಿಂದ ಮಲ್ಯವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿತ್ತು. ಬಳಿಕ ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.