ನವದೆಹಲಿ, ಆ 07 (DaijiworldNews/PY): ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಮೌಲ್ಯವನ್ನು ಹೆಚ್ಚಿಸಿದ್ದು, ಇನ್ನು ಚಿನ್ನ ಅಡವಿಟ್ಟರೆ ಶೇ.90ರಷ್ಟು ಸಾಲವನ್ನು ಬ್ಯಾಂಕ್ಗಳು ಕೊಡಲಿವೆ.
ಇಲ್ಲಿಯವರೆಗೆ ಶೇ.75ರಷ್ಟು ಮಾತ್ರ ಸಾಲ ಕೃಷಿಯೇತರ ಬಳಕೆಗೆ ಚಿನ್ನದ ಮೌಲ್ಯದ ಮೇಲೆ ಸಿಗುತ್ತಿತ್ತು. ಈಗ ಈ ಮಿತಿಯನ್ನು ಜನ ಸಾಮಾನ್ಯರ ಹಾಗೂ ಉದ್ಯಮಿಗಳ ಅನುಕೂಲಕ್ಕಾಗಿ ಹೆಚ್ಚು ಮಾಡಲಾಗಿದೆ. ಮುಂದಿನ ಮಾರ್ಚ್ವರೆಗೆ ಈ ಮಿತಿ ಈ ಮಿತಿ ಇರಲಿದೆ ಎಂಬುದಾಗಿ ಆರ್ಬಿಐ ತಿಳಿಸಿದೆ.
ಇನ್ನು ಮರುಪಾವತಿಯಾಗದೇ ಇರುವಂತಸಾಲವನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸದೇ ಒಂದು ಬಾರಿಗೆ ಸಾಲವನ್ನು ಪುನರಚನೆ ಮಾಡುವಂತೆ ಬ್ಯಾಂಕ್ಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇದರೊಂದಿಗೆ 10 ಸಾವಿರ ಕೋ.ರೂ.ಗಳನ್ನು ಮನೆ ನಿರ್ಮಾಣ ವಲಯ ಸೇರಿದಂತೆ ಬ್ಯಾಂಕೇತರ ಸಣ್ಣ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ನೆರವಿಗಾಗಿ ಪ್ರಕಟಿಸಲಾಗಿದೆ. ನಬಾರ್ಡ್ಗೆ 5 ಸಾವಿರ ಕೋ.ರೂ.ಗಳ ಹೆಚ್ಚುವರಿ ನೆರವು ಘೋಷಣೆ ಮಾಡಲಾಗಿದೆ. ಇನ್ನು ಅತಿ ಸಣ್ಣ ಸೇರಿದಂತೆ ಸಣ್ಣ ಮಧ್ಯಮ ಗಾತ್ರದ ಉದ್ಯಮಗಳು ವಾಣಿಜ್ಯ ಸಾಲಗಳನ್ನು ಬ್ಯಾಂಕ್ಗಳು ಪುನರೂಪಿಸಬಹುದು ಎಂದು ತಿಳಿಸಿದ್ದಾರೆ.