ನವದೆಹಲಿ, ಆ 07 (DaijiworldNews/PY): ಕೇಂದ್ರ ಸರ್ಕಾರವು, ಭ್ರಷ್ಟ ಹಾಗೂ ಆಲಸಿ ಹೊಂದಿರುವ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಎಫ್ ಆರ್ 56(ಜೆ)/ಕಾಯ್ದೆ 48ರ ಸಿಸಿಎಸ್ ಕಾಯ್ದೆ 1972ರ ಪ್ರಕಾರ 50 ವರ್ಷಕ್ಕಿಂತ ಮೇಲ್ಪಟ್ಟ ನೌಕರರನ್ನು ಕಡ್ಡಾಯವಾಗಿ ನಿವೃತ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ. ಈಗಾಗಲೇ ಭ್ರಷ್ಟ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಿತ್ತು.
ಕೊರೊನಾ ಕಾರಣದಿಂದಾಗಿ ನೌಕರರನ್ನು ನಿವೃತ್ತಿ ಮಾಡುವ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ವಿಶೇಷ ತಂಡವನ್ನು ರಚಿಸಿದೆ.
ನಿಯಮದ ಪ್ರಕಾರ, 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಸೇವೆಯಿಂದ ನಿವೃತ್ತಿಯಾಗಬೇಕು ಎಂದು ವರದಿ ತಿಳಿಸಿದೆ.