ನವದೆಹಲಿ, ಆ 07 (DaijiworldNews/PY): ರಾಷ್ಟ್ರೀಯ ಶಿಕ್ಷಣ ನೀತಿ ಯಾವುದೇ ಪಕ್ಷಪಾತವನ್ನು ಹೊಂದಿಲ್ಲ. ತನ್ನ ಶಿಕ್ಷಣ ನೀತಿಯೊಂದಿಗೆ ಪ್ರತಿಯೊಂದು ದೇಶವು ಅಭಿವೃದ್ದಿಯಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ನವಭಾರತದ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿ ಸುಧಾರಣೆ ಬಗ್ಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಬಂದ ನಂತರ, ದೇಶದ ಯಾವುದೇ ವಿಭಾಗವು ನೀತಿಗೆ ಯಾವುದೇ ರೀತಿಯಾದ ಪಕ್ಷಪಾತವಿಲ್ಲ ಎಂದಿಲ್ಲ. ಇದು ಸಂತೋಷದ ವಿಷಯವಾಗಿದೆ ಎಂದರು.
ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹೊಂದಬೇಕು. ಯಾರೂ ಸಣ್ಣವರು, ಯಾರೂ ದೊಡ್ಡವರು ಎನ್ನುವುದಿಲ್ಲ. ದೇಶದಲ್ಲಿರುವ ಹಲವು ಶಿಕ್ಷಣ ಸಂಸ್ಥೆಗಳಿಗೆ ಸ್ಯಾಯುತ್ತತೆ ನೀಡಲಾಗಿದೆ. ಪ್ರತಿಯೋರ್ವ ವಿದ್ಯಾರ್ಥಿಯು ತನಗೆ ಇಷ್ಟವಾಗುವುದನ್ನೇ ಕಲಿಯಬೇಕು. ಅಲ್ಲದೇ, ಹಲವಾರು ವಿಷಯಗಳ ಕೋರ್ಸ್ ಹಾಗೂ ಆಯ್ಕೆಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ. ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಕೋರ್ಸ್ ಅನ್ನು ಬಿಡಬಹುದಾಗಿದ್ದು, ತನಗೆ ಬೇಕಾದನ್ನು ಮಾತ್ರ ಕಲಿಯಬಹುದಾಗಿದೆ ಎಂದು ಹೇಳಿದರು.
ದೇಶಕ್ಕೆ ಉತ್ತಮ ವ್ಯಕ್ತಿಗಳನ್ನು, ಉತ್ತಮ ವಿದ್ಯಾರ್ಥಿಗಳನ್ನು ನೀಡುವಂತ ಸಾಮರ್ಥ್ಯವನ್ನು ಶಿಕ್ಷಕರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ನೂತ ಶಿಕ್ಷಣ ಜಾರಿಗಾಗಿ ಒಟ್ಟಾಗಿ ಎಲ್ಲಾರೂ ಶ್ರಮವಹಿಸಬೇಕು ಎಂದು ತಿಳಿಸಿದರು.
ಇನ್ನು ಸರ್ಕಾರದಿಂದ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಗೌರವ ದೊರಕಲಿದೆ. ಅಲ್ಲದೇ, ಈ ನೂತ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳಿಗೆ ಪುಸ್ತಕದ ಹೊರೆ ಕಡಿಮೆಯಾಗಲಿ. ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯು ಯಾವುದನ್ನ ಕಲಿಯಬೇಕು ಎನ್ನುವ ಬಗ್ಗೆ ತಿಳಿಸಿಕೊಡುತ್ತದೆ. ಆದರೆ, ನೂತ ಶಿಕ್ಷಣ ನೀತಿಯು ಚಿಂತನೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.