ಕಲ್ಲಿಕೋಟೆ, ಆ. 07 (DaijiworldNews/HR): ಕೋವಿಡ್ 19 ಸಮಸ್ಯೆಯಿಂದ ಅನೇಕರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಅಂತೆಯೇ ಕೇರಳದ ಕಲ್ಲಿಕೋಟೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯೊಬ್ಬರು ಜೀವನ ನಿರ್ವಹಣೆಗಾಗಿ ಆ್ಯಂಬುಲೆನ್ಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಲ್ಲಿಕೋಟೆಯ ದೀಪಾ ಜೋಸೆಫ್ ಎಂಬಾಕೆ ಕಾಲೇಜ್ವೊಂದರಲ್ಲಿ ಬಸ್ ಚಾಲಕಿಯಾಗಿದ್ದರು. ಇದೀಗ ಕೋವಿಡ್ ಕಾರಣಗಳಿಂದ ಶಾಲಾ ಕಾಲೇಜುಗಳು ಸ್ಥಗಿತಗೊಂಡ ಕಾರಣ ಜೀವನ ನಿರ್ವಹಣೆಗೆ ಕಷ್ಟವಾಗಿದ್ದು ಆ್ಯಂಬುಲೆನ್ಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ.
ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಾ ಜೋಸೆಫ್ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದ್ದು ಬೇರೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಹೀಗಾಗಿ ಜೀವನ ನಿರ್ವಹಣೆಗಾಗಿ ಆ್ಯಂಬುಲೆನ್ಸ್ ಚಾಲಕಿಯಾಗಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಪತಿ ಇದ್ದಾರೆ. ಈ ಕೆಲಸಕ್ಕೆ ನನ್ನ ಕುಟುಂಬದವರ ಸಂಪೂರ್ಣ ಬೆಂಬಲ ಇದೆ ಎಂದು ದೀಪಾ ಜೋಸೆಫ್ ತಿಳಿಸಿದ್ದಾರೆ.