ಅಯೋಧ್ಯೆ, ಆ. 07 (DaijiworldNews/HR): ನಾನೊಬ್ಬ ಮುಖ್ಯಮಂತ್ರಿಯಾಗಿ ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲಆದರೆ ಯೋಗಿ ಹಾಗೂ ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅವರು ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ, ಇದೇ ರೀತಿ ಮಸೀದಿಯ ನಿರ್ಮಾಣ ಕಾರ್ಯಕ್ಕೆ ಹಾಜರಾಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾನು ಸಿಎಂ ಆಗಿ ತಾರತಮ್ಯ ಮಾಡುವುದಿಲ್ಲ, ಆದರೆ ನಾನೊಬ್ಬ ಹಿಂದೂ ಆಗಿ ಅಯೋಧ್ಯೆಯ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಉತ್ತರ ನೀಡಿದ್ದಾರೆ.
ಒಬ್ಬ ಯೋಗಿ ಹಾಗೂ ಹಿಂದೂವಾಗಿ ನಾನು ಅಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಯಾಕೆಂದರೆ ನನ್ನ ಧರ್ಮವನ್ನು ಪಾಲಿಸುವ ಹಕ್ಕು ನನಗಿದೆ ಎಂದು ತಿಳಿಸಿದ್ದಾರೆ.