ನವದೆಹಲಿ, ಆ 07 (DaijiworldNews/PY): ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಕೊರೊನಾ ಲಸಿಕೆಯ ಬೆಲೆಯನ್ನು ಹತ್ತು ಪಟ್ಟಿಗಿಂತಲೂ ಕಡಿಮೆ ಬೆಲೆಗೆ ಉತ್ಪಾದಿಸಿ ನೀಡಲಿದ್ದು, ಈ ಲಸಿಕೆಯನ್ನು ಅಮೆರಿಕದ ಮಾಡೆರ್ನಾ ಕಂಪೆನಿಯು ದುಬಾರಿ ಬೆಲೆಗೆ ನಿಗದಿಪಡಿಸಿದೆ.
ಬಿಲ್ ಆ್ಯಂಡ್ ಮೆಲಿಂಡಾ ಗೇಟ್ ಪ್ರತಿಷ್ಠಾನದಿಂದ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಹಣಕಾಸಿ ನೆರವು ದೊರೆಯುತ್ತಿರುವುದರಿಂದ ಭಾರತ ಹಾಗೂ ಆರ್ಥಿಕವಾಗಿ ಹಿಂದುಳಿದ ನೂರು ದೇಶಗಳಿಗೆ ಪ್ರತಿ ಡೋಸ್ಗೆ 225 ರೂ.ದರದಲ್ಲಿ ಕೊರೊನಾ ಲಸಿಕೆಯನ್ನು ಪೂರೈಕೆ ಮಾಡಲಿದೆ.
ಈ ಕೊರೊನಾ ಲಸಿಕೆಗೆ ಅಮೆರಿಕಾದ ಮಾಡೆರ್ನಾ ಕಂಪೆನಿಯು 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿ ಪಡಿಸಿದೆ.
ಭಾರತದಲ್ಲಿ ಸಿರಂ ಇನ್ಸ್ಟಿಟ್ಯೂಟ್ ಲಸಿಕೆಗೆ 1,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಬೆಲೆಯನ್ನು ಗೇಟ್ಸ್ ಪ್ರತಿಷ್ಠಾನದ ನೆರವು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದಂತಾಗಿದೆ.
ಕೆಲವು ಸಂಸ್ಥೆಗಳು ಆಯಾ ದೇಶಗಳ ಆರ್ಥಿಕ ಸಹಕಾರದ ಅಡಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ಈ ಕಾರಣದಿಂದ ಲಸಿಕೆಯನ್ನು ಅಂತಹ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದರೆ, ಉಳಿದಂತೆ ದೇಶಗಳು ಈ ಲಸಿಕೆಯನ್ನು ಅಧಿಕ ಬೆಲೆಗೆ ಕೊಡಬೇಕಾಗುತ್ತದೆ.