ಬೆಂಗಳೂರು, ಆ 08 (DaijiworldNews/PY): ಕೊರೊನಾ ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ನೌಕರರು ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 30 ಲಕ್ಷ ವಿಮಾ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಕೊರೊನಾ ಸೋಂಕಿಗೆ ಒಳಗಾದರೆ ಅವರ ಸಂಪೂರ್ಣ ವೆಚ್ಚವನ್ನೂ ಕೂಡಾ ಸರ್ಕಾರವೇ ಭರಿಸಲಿದೆ.
ಇಲ್ಲಿಯವರೆಗೆ ಈ ಸೌಲಭ್ಯವು ಕೊರೊನಾ ಸೇನಾನಿಗಳಿಗೆ ಮಾತ್ರವೇ ಅನ್ವಯಿಸಿತ್ತು. ಇನ್ನು ಮುಂದೆ ಕೊರೊನಾ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ನೌಕರರಿಗೂ ಇದು ಅನ್ವಯವಾಗಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಚಿಕಿತ್ಸಾ ವೆಚ್ಚ ಹಾಗೂ ವಿಮಾ ಮೊತ್ತದ ಸೌಲಭ್ಯವನ್ನು ಎಲ್ಲರಿಗೂ ಕಲ್ಪಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.